ವಿಜಯಪುರ: ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ರವರ ಜನ್ಮ ದಿನಾಚರಣೆ ಅಂಗವಾಗಿ ಸೇವೆ ಸಮರ್ಪಣೆ ಕಾರ್ಯಕ್ರಮವನ್ನು ನಾಗಠಾಣ ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ವಿಜಯಪುರ ತಾಲೂಕಿನ ಬುರಣಾಪುರದಲ್ಲಿ ಶಾಲಾ ಮಕ್ಕಳಿಗೆ ಹಣ್ಣು, ಹಂಪಲು ವಿತರಣೆ ಮಾಡಲಾಯಿತು. ಮೋದಿ ಅವರ ಅಭಿವೃದ್ದಿಯ ಕೆಲಸ ದೇಶದ ಜನರಲ್ಲಿ ನೆಮ್ಮದಿ ಮೂಡಿಸಿದೆ. ಇಂತಹ ಮಹಾನ್ ನಾಯಕನ ಬರ್ತಡೆ ಆಚರಿಸುವುದು ನಮ್ಮೆಲ್ಲರ ಅದೃಷ್ಠ ಎಂದು ಜಿಪಂ ಸದಸ್ಯ ನವೀನ ಅರಕೇರಿ ಹೇಳಿದ್ರು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಈಶ್ವರ ಶಿವೂರ, ಪ್ರಧಾನ ಕಾರ್ಯದರ್ಶಿ ಸಿದ್ದು ದಸ್ತರಡ್ಡಿ, ಜಿಲ್ಲಾ ಪಂಚಾಯತಿ ಸದಸ್ಯ ನವೀನ ಅರಕೇರಿ, ಯುವ ಮೋರ್ಚಾ ಅಧ್ಯಕ್ಷ ರವಿ ಬಿರಾದಾರ, ಸಾಮಾಜಿಕ ಜಾಲತಾಣ ಸಂಚಾಲಕ ಅಮಸಿದ್ದ ಬಬಲಾದಿ, ಸಹ ಸಂಚಾಲಕ ನಿಂಗಪ್ಪ ಹಂಗರಗಿ, ಚಿದಾನಂದ ಯಳಮೇಲಿ, ಪ್ರವೀಣ ಅರವತ್ತು, ಸಂತೋಷ ಹಿರೇಮಠ, ಬಸವರಾಜ ಮಸಳಿ,ಗ್ರಾಮ ಪಂಚಾಯತ್ ಸದಸ್ಯರಾದ ರಾಜು ಹಳ್ಳಿ, ಪರಮೇಶ್ವರ ಮಾನೆ, ಮುದಕಪ್ಪ ಮಾದರ, ಮಾಂತೇಶ ಬಿರಾದಾರ, ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.