ರಾಯಬಾಗ ಪಟ್ಟಣದ ಮಹಾವೀರ ಭವನದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ರೈತ ಸಮಾವೇಶಕ್ಕೆ ಕೇಂದ್ರ ಕಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು. ಸಂಸದ ಈರಣ್ಣ ಕಡಾಡಿ, ಶಾಸಕ ಡಿ.ಎಂ.ಐಹೊಳೆ, ಪಿ.ರಾಜೀವ, ಡಾ.ರಾಜೇಶ ನೇರ್ಲಿ ಇತರರು ಇದ್ದರು. 
ಜಿಲ್ಲೆ

ಪ್ರಧಾನಿ ಮೋದಿ ರೈತರ ಬೆನ್ನೆಲುಬು

Belagavi

ರಾಯಬಾಗ: ಪ್ರಧಾನಮಂತ್ರಿ ನರೇಂದ್ರ ಮೋದಿ ರೈತಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರೈತರ ಬೆನ್ನೆಲುಬಾಗಿದ್ದಾರೆ ಎಂದು ಕೇಂದ್ರ ಕಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಪಟ್ಟಣದ ಮಹಾವೀರ ಭವನದ ಆವರಣದಲ್ಲಿ ಭಾನುವಾರ ಬಿಜೆಪಿಯಿಂದ ಹಮ್ಮಿಕೊಂಡಿದ್ದ ರೈತ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ, ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ 1.25 ಲಕ್ಷ ಕೋಟಿ ರೂ. ರೈತರ ಅಭಿವದ್ಧಿಗಾಗಿ ಮೀಸಲಿರಿಸಿದೆ. ಧಾನ್ಯ, ತರಕಾರಿ ಮತ್ತು ಹಣ್ಣುಗಳನ್ನು ಸಂರಕ್ಷಿಸಿಡುವ ಯೋಜನೆ ರೂಪಿಸಲು 1 ಲಕ್ಷ ಕೋಟಿ ರೂ. ತೆಗೆದಿಡಲಾಗಿದೆ. ನಮ್ಮ ರೈತರು ವಿದೇಶಗಳಿಗೆ ಉತ್ಪನ್ನಗಳನ್ನು ರ್ತು ಮಾಡುವ ಮೂಲಕ ಆದಾಯ ದ್ವಿಗುಣಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ರೈತರಿಗಾಗಿ ಮೊತ್ತಮೊದಲು ಕೃಷಿ ಬಜೆಟ್ ಮಂಡಿಸಿದ್ದು ನಮ್ಮ ಹೆಮ್ಮೆ. ಆದರೆ ಕಾಂಗ್ರೆಸ್ ಸುಮಾರು 70 ವರ್ಷ ಆಡಳಿತ ನಡೆಸಿದರೂ, ರೈತರ ಏಳ್ಗೆಗಾಗಿ ಯಾವುದೇ ಅಭಿವದ್ಧಿ ಯೋಜನೆ ಕೈಗೊಳ್ಳಲಿಲ್ಲ. ಬದಲಾಗಿ ಅವರ ಹೆಸರಿನಲ್ಲಿ ಚುನಾವಣೆ ಬಂದಾಗೊಮ್ಮೆ ಸುಳ್ಳು ಪ್ರಚಾರ ಮಾಡಿ ಮೊಸಳೆ ಕಣ್ಣೀರು ಸುರಿಸುತ್ತದೆ ಎಂದು ಟೀಕಿಸಿದರು.

ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಮಾತನಾಡಿ, ರೈತರು ಸ್ವಾವಲಂಬನೆಯಾದರೆ ಮಾತ್ರ ದೇಶ ಏಳಿಗೆ ಸಾಧ್ಯ. ಕೃಷಿ ಸಮ್ಮಾನ್ ಯೋಜನೆಯಿಂದ ರೈತರಿಗೆ ಡಿಬಿಟಿ ಮೂಲಕ ಖಾತೆಗಳಿಗೆ ಜಮೆ ಆಗುತ್ತಿದೆ ಎಂದರು.

ಕುಡಚಿ ಶಾಸಕ ಪಿ.ರಾಜೀವ ಮಾತನಾಡಿ, ರಾಜಸ್ಥಾನದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಅಲ್ಲಿನ ರೈತರು ಸಾಲ ತೀರಿಸಲು ಭೂಮಿ ಮಾರಾಟ ಮಾಡುವ ಹಂತಕ್ಕೆ ತಲುಪಿದೆ. ಪ್ರಧಾನಿ ಮೋದಿ ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ ಎಂದರು.

ಶಾಸಕ ಡಿ.ಎಂ. ಐಹೊಳೆ ಮಾತನಾಡಿ, ಶಾಸಕನಾಗಿ ಕರಗಾಂವ ಏತ ನೀರಾವರಿ ಯೋಜನೆ ಜಾರಿಗೆ ತಂದಿದ್ದು, ಸದ್ಯ ಬೆಂಡವಾಡ ಮತ್ತು ಹನುಮಾನ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಪ್ರಯತ್ನ ಮಾಡಲಾಗುವುದು ಎಂದರು.

ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಭೆಂಡವಾಡೆ, ಜಿಲ್ಲಾಧ್ಯಕ್ಷ ಸತ್ಯಪ್ಪ ನಾಯಿಕ, ಸಂಜಯ ಪಾಟೀಲ, ಬಸವರಾಜ ಡೊಣವಾಡೆ, ಮನೋಜಕುಮಾರ ಮನಗುಳಿ, ಮಹೇಶ ಭಾತೆ, ಭರತೇಶ ಬನವಣೆ, ಸತೀಶ ಅಪ್ಪಾಜಿಗೋಳ, ತಾತ್ಯಾಸಾಬ ಕಾಟೆ, ಎಲ್.ಬಿ.ಚೌಗುಲೆ ಇದ್ದರು.