ಚಿತ್ರದುರ್ಗ: ಚಿತ್ರದುರ್ಗದ ಸರ್ಕಾರಿ ಪಾಲಿಟೆಕ್ನಿಕ್ ಸೇರಿ ರಾಜ್ಯದ ಆಯ್ದ 30 ಸರ್ಕಾರಿ ಮತ್ತು 13 ಖಾಸಗಿ ಪಾಲಿಟೆಕ್ನಿಕ್‌ಗಳಲ್ಲಿ 2025-26ನೇ ಸಾಲಿನಲ್ಲಿ ಲಭ್ಯವಿರುವ ಪ್ರಥಮ ಸೆಮಿಸ್ಟರ್ ಡಿಪ್ಲೊಮಾ ಪ್ರವೇಶಕ್ಕೆ ರಾಜ್ಯಮಟ್ಟದಲ್ಲಿ ನಾನ್ ಇಂಟರ್ ಆಕ್ಟೀವ್ ಕೌನ್ಸೆಲಿಂಗ್‌ಗೆ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಮೇ. 15ರೊಳಗೆ ಅರ್ಜಿ ಆಹ್ವಾನಿಸಲಾಗಿದೆ.
ಅಸಕ್ತರು ಅಭ್ಯರ್ಥಿಗಳು ಡಿಡಿಡಿ.ಠಿಛಿ.ಚ್ಟ್ಞಠಿ.ಜಟ.ಜ್ಞಿ ಮೂಲಕ ಅರ್ಜಿ ಹಾಗೂ ಮಾಹಿತಿ ಪುಸ್ತಕ ಪಡೆಯಬಹುದು. ಮೇ 15 ರಂದು ಸಂಜೆ 6 ಗಂಟೆ ನಂತರ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸಲಾಗುತ್ತದೆ.
16 ರಂದು ಮೆರಿಟ್ ಪಟ್ಟಿಗೆ ಆಕ್ಷೇಪಣೆ ಸ್ವೀಕಾರ, ತಿದ್ದುಪಡಿ ನಡೆಸಲಾಗುತ್ತದೆ. 17ರ ಸಂಜೆ 5.30ರ ನಂತರ ಅಂತಿಮ ಮೆರಿಟ್ ಪಟ್ಟಿ ಪ್ರಕಟಿಸಲಾಗುವುದು. 21 ರಂದು ಸಂಜೆ 5.30ರ ನಂತರ ಸೀಟು ಹಂಚಿಕೆ ನಡೆಯಲಿದೆ. 22ರಿಂದ ಎರಡು ದಿನಗಳ ಸೀಟು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳ ನಿಗದಿತ ಶುಲ್ಕದೊಂದಿಗೆ ಪ್ರವೇಶ ಪ್ರಕ್ರಿಯೆ ನಡೆಸಲಾಗುವುದು.
24 ರಿಂದ 31ರವರೆಗೆ ಸೀಟು ಹಂಚಿಕೆಯಾದ ನಂತರ ಭರ್ತಿಯಾಗದ ಉಳಿಕೆ ಸೀಟುಗಳನ್ನು ಪ್ರಾಚಾರ್ಯರ ಹಂತದಲ್ಲಿ ಆಪ್‌ಲೈನ್ ಮೂಲಕ ಮೆರಿಟ್ ಮತ್ತು ರೋಸ್ಟರ್ ಅನುಗುಣವಾಗಿ ಸೀಟು ಹಂಚಿಕೆ ಮಾಡಲಾಗುವುದು ಎಂದು ಚಿತ್ರದುರ್ಗ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಆರ್. ರಾಘವೇಂದ್ರಚಾರ್ ತಿಳಿಸಿದ್ದಾರೆ.