ಕಲಬುರಗಿ: ಚಿಂಚೋಳಿ ತಾಲೂಕಿನಲ್ಲಿ ವ್ಯಕ್ತಿಯೊಬ್ಬರು ಪ್ರಥಮ ದರ್ಜೆ ಗುತ್ತಿಗೆದಾರ ಎಂದು ನಕಲಿ ಪರವಾನಗಿ ಪತ್ರ ಮುದ್ರಿಸಿ, ವಿವಿಧ ಗ್ರಾಪಂಗಳ ಕೆಲಸಗಳನ್ನು ಮಾಡಿ, ಅವ್ಯವಹಾರ ನಡೆಸಿದ್ದು, ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಹುಜನ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ರವಿ ಕೋರಿ ಆಗ್ರಹಿಸಿದರು.
ಪಂಚಾಯತ್ ರಾಜ್ ಇಲಾಖೆಯ ನಕಲಿ ಪರವಾನಗಿ ಸೃಷ್ಟಿಸಿ ಐದಾರು ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ಪಡೆದು ಅವ್ಯವಹಾರ ನಡೆಸಿz್ದÁನೆ. ನಕಲಿ ಪರವಾನಗಿ ಮುದ್ರಿಸಿಕೊಂಡು ಸರ್ಕಾರಕ್ಕೆ ವಂಚನೆ ಮಾಡಿದ್ದಾನೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸರ್ಕಾರಕ್ಕೆ ವಂಚನೆ ಮಾಡಿದ ಗುತ್ತಿಗೆದಾರರನ ವಿರುದ್ಧ ಕ್ರಮಕ್ಕೆ ಪಂಚಾಯತ್ ರಾಜ್ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಪಂಚಾಯತ್ ರಾಜ್ ಇಲಾಖೆಯೂ ಆತನು ಗುತ್ತಿಗೆದಾರನೇ ಅಲ್ಲ, ಅವನಿಗೆ ಪರವಾನಗಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಕಲಿ ಪರವಾನಗಿ ಸೃಷ್ಟಿಸಿದ್ದು, ಸಾಬೀತಾಗಿದ್ದು, ಆತನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ನಕಲಿ ಗುತ್ತಿಗೆದಾರನಿಗೆ ಕಾಮಗಾರಿಗಳನ್ನು ನೀಡಿ, ಅಕ್ರಮ ನಡೆಸಿದ ಪಿಡಿಒಗಳು ಸೇರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಅಂಬಾರಾಯ ದಸ್ತಾಪುರ, ಮೀಲಿಂದ ಕಣಮಸ, ಶ್ರೀ ಖಾಮಣಿ, ಶಂಭುಲಿAಗ ಸಿಂಗೆ, ಮಾಪಣ್ಣ ಕಟ್ಟಿ, ಕಲ್ಯಾಣಿ ಹಡಗಿಲ್ ಇತರರಿದ್ದರು.