ಜಿಲ್ಲೆ

ಪ್ರತ್ಯೇಕ ಪ್ರಕರಣದಲ್ಲಿ ಏಳು ಆರೋಪಿಗಳ ಬಂಧನ

ಬೆಳಗಾವಿ: ನಗರದಲ್ಲಿನ ನಾಲ್ಕು ಪ್ರತ್ಯೇಕ ಗಾಂಜಾ ಮಾರಾಟ ಮತ್ತು ಸೇವನೆ ಪ್ರಕರಣದಲ್ಲಿ ಏಳು ಆರೋಪಿಗಳನ್ನು ಬಂಧಿಸಿ, 2 ಕೆಜಿ 74 ಗ್ರಾಂ ಗಾಂಜಾ ವಶಕ್ಕೆ ಪಡೆಯುವಲ್ಲಿ ನಗರ ಪೊಲೀಸರು ಶನಿವಾರ ಯಶಸ್ವಿಯಾಗಿದ್ದಾರೆ.

ಮಾರಿಹಾಳ ಪೊಲೀಸ್​ ಠಾಣೆ ವ್ಯಾಪ್ತಿಯ ಮುತಗಾ ಗ್ರಾಮದ ಹತ್ತಿರ ಆರೋಪಿತಗಳಾದ ವಿನೂತ್​ ಪ್ರಕಾಶ ಕೊಣ್ಣೂರ, ಸೂರಜ ಸುರೇಶ ಹಿಂಡಲಗೇಕರ ಅವರನ್ನು, ಖಡೆ ಬಜಾರ ಪೊಲೀಸ್​ ಠಾಣೆ ವ್ಯಾಪ್ತಿಯ ಸರ್ದಾರ ಮೈದಾನ್​ಬಳಿ ಹರ್ಷಾ ಸುನೀಲ ವರ್ಮಾ, ಪ್ರಜ್ವಲ ಗುಂಡು ನಾವಗೇಕರ, ಉತ್ಕರ್ಷ ಸುನೀಲ ವರ್ಮಾ ಅವರನ್ನು ಮತ್ತು ಮಾರ್ಕೆಟ್​ ಪೊಲೀಸ್​ ಠಾಣಾ ವ್ಯಾಪ್ತಿಯ ಹಳೆ ಬಾಜಿ ಮಾರ್ಕೆಟ್​ ಹತ್ತಿರ ಹರ್ಷಲ ಸಂಜಯ ಗುರವ ಹಾಗೂ ಕೇಂದ್ರ ಬಸ್​ ನಿಲ್ದಾಣ ಹತ್ತಿರ ಗಾಂಜಾ ಸೇವಿಸಿದ್ದ ದರ್ಶನ ದಿನೇಶ ಗಾವಡೆ ಅವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.