ಪ್ರತ್ಯೇಕ ನಾಲ್ಕು ಪ್ರಕರಣ: ಏಳು ಜನರ ಬಂಧನ
ಬೆಳಗಾವಿ : ನಗರದಲ್ಲಿ ನಡೆದ ಪ್ರತ್ಯೇಕ ಗಾಂಜಾ ಮಾರಾಟ ಮತ್ತು ಸೇವನೆಯ ನಾಲ್ಕು ಪ್ರಕರಣದಲ್ಲಿ ಏಳು ಜನ ಆರೋಪಿತರನ್ನು ಬಂಧಿಸಿ,2ಕೆಜಿ 74 ಗ್ರಾಂ ಗಾಂಜಾ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ .
ಗಾಂಜಾ ಮಾರಾಟದಲ್ಲಿ ತೊಡಗಿದ್ದ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ಮುತಗಾ ಗ್ರಾಮದ ಹತ್ತಿರ ಆರೋಪಿತರಾದ ವಿನುತ್ ಪ್ರಕಾಶ ಕೊಣ್ಣೂರ,ಸೂರಜ ಸುರೇಶ ಹಿಂಡಲಗೇಕರ,ಖಡೆ ಬಜಾರ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ದಾರ ಮೈದಾನ್ ಬಳಿ ಹರ್ಷಾ ಸುನೀಲ ವರ್ಮಾ, ಪ್ರಜ್ವಲ ಗುಂಡು ನಾವಗೇಕರ,ಉತ್ಕರ್ಷ ಸುನೀಲ ವರ್ಮಾ ಎಂಬುವವರನ್ನು ,ಮತ್ತು ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಬಾಜಿ ಮಾರ್ಕೆಟ್ ಹತ್ತಿರ ಹರ್ಷಲ ಸಂಜಯ ಗುರವ ಎಂಬುವರನ್ನು ಹಾಗೂ ಕೇಂದ್ರ ಬಸ್ ನಿಲ್ದಾಣ ಹತ್ತಿರ ಗಾಂಜಾ ಸೇವಿಸಿದ್ದ ದರ್ಶನ ದಿನೇಶ ಗಾವಡೆ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.