ಜಿಲ್ಲೆ

ಪ್ರತ್ಯೇಕ ಕ್ರೀಡಾ ಪ್ರಾಧಿಕಾರ ರಚಿಸಿ

ಯಾದಗಿರಿ: ದೇಶ, ವಿದೇಶಗಳಲ್ಲಿ ತಮ್ಮ ಪ್ರತಿಭೆ ಅನಾವಣಗೊಳಿಸುವ ಮೂಲಕ ದೇಶಕ್ಕೆ ಕೀರ್ತಿ ತರಲು ಹಾಗೂ ಸಾಧಕರಾಗಲು ಕಲ್ಯಾಣ ಕರ್ನಾಟಕ ಪ್ರದೇಶದ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಭಿವೃದ್ಧಿ ಪ್ರಾಧಿಕಾರದ ಅಗತ್ಯ ಇದೆ ಎಂಬ ಕೂಗು ಹಿಂದುಳಿದ ಯಾದಗಿರಿ ಜಿಲ್ಲೆ ಸೇರಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಕ್ರೀಡಾಸಕ್ತರ ಒತ್ತಾಸೆಯಾಗಿದೆ.

ಈ ಎಲ್ಲ ಜಿಲ್ಲೆಗಳಲ್ಲಿ ಕ್ರೀಡಾಪಟುಗಳ ಮತ್ತು ಕ್ರೀಡಾಂಗಣಗಳ ಕೊರತೆ ಇಲ್ಲ. ಆದರೆ ವಿವಿಧ ಆಟಗಳಲ್ಲಿ ತರಬೇತಿ ಪಡೆಯಲು ಕೋಚ್, ಕ್ರೀಡಾಸಾಮಾಗ್ರಿ ಮತ್ತು ಆರ್ಥಿಕತೆಯ ಕೊರತೆ ಇಲ್ಲಿದೆ.

ಕಳೆದ ಅರ್ಧ ಶತಮಾನದಿಂದಲೂ ಇಲ್ಲಿನ ಸಾವಿರಾರು ಜನರು ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಬೇಕೆಂಬ ಹಂಬಲದಿAದ ಇದ್ದುದರಲ್ಲಿಯೇ ಕಲಿತು ಜಿಲ್ಲಾ, ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಆದರೆ ಅವಕಾಶ ಮತ್ತು ಸಂಪನ್ಮೂಲದ ಸೌಲಭ್ಯ ಸಿಕ್ಕರೆ ವಿವಿಧ ಕ್ರೀಡೆಗಳಲ್ಲಿ ರಾಷ್ಟç ಮಟ್ಟದಲ್ಲಿ ಸಾಧನೆ ಮಾಡಿ, ಇಂದು ವಿವಿಧ ಆಟಗಳಲ್ಲಿ ನಮ್ಮವರು ಇರುತ್ತಿದ್ದರು. ಆದರೆ ಏನೇ ಕಲಿತರೂ, ಎಷ್ಟೇ ಆಡಿದರೂ ಕಲ್ಯಾಣದ ಗಡಿ ದಾಟಿ ಹೋಗಿ ಕ್ರೀಡಾಪಟು ಆಗಿರುವ ಉದಾಹರಣೆ ಮಾತ್ರ ಅತಿವಿರಳ.

ಒಂದೇ ಒಂದು ಕ್ರೀಡೆಯಲ್ಲಿ ಈ ಭಾಗದ ಒಬ್ಬನೇ ಒಬ್ಬ ಆಟಗಾರ ಇದ್ದಾನೆ ಎಂದು ಹೇಳಿಕೊಳ್ಳುವಂತಹ ಸ್ಥಿತಿ ನಮ್ಮವರಿಗಿಲ್ಲ. ಅಂದರೆ, ಏನೇ ಪ್ರಯತ್ನ ಮಾಡಿದರೂ ಅದು ನಮ್ಮ ತವರೂರಲ್ಲಿಯೇ ತೊರಿಸಬೇಕು. ಕೊನೆಗೆ ಅವಕಾಶ ಮತ್ತು ಸೌಲಭ್ಯ ಕೊರತೆಯಿಂದ ಆ ದಾರಿಯೇ ಬಿಟ್ಟ ಸಾವಿರಾರು ಕ್ರೀಡಾಪಟುಗಳು ಇಲ್ಲಿ ಕಾಣಸಿಗುತ್ತಾರೆ.


ಹೀಗಾಗಿ ಈ ಏಳು ಜಿಲ್ಲೆಗಳ ಕ್ರೀಡಾಪಟುಗಳ ಏಳಿಗೆಗೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ಕ್ರೀಡಾ ಪ್ರಾಧಿಕಾರ ರಚನೆಯಾಗಬೇಕು. ಅದು ಕಲಬುರಗಿ ಕೇಂದ್ರ ಸ್ಥಾನದಲ್ಲಿ ೨೫ ಎಕರೆ ಸ್ಥಳದಲ್ಲಿ ಕ್ರೀಡಾ ಸಂಕೀರ್ಣ ಅಂತ ಮಾಡಿ, ಅಲ್ಲಿ ಎಲ್ಲ ಸೌಲಭ್ಯ ಒದಗಿಸಿದರೆ ಕೆಲವೇ ವರ್ಷಗಳಲ್ಲಿ ಈ ನೆಲದ ಆಟಗಾರರು ರಾಷ್ಟç ಮತ್ತು ಅಂತಾರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡುವುದರಲ್ಲಿ ಯಾವುದೇ ಸಂಶಯವೇ ಇಲ್ಲ ಎನ್ನುವುದು ಇಲ್ಲಿನ ಅನೇಕ ಹಿರಿಯ ಕ್ರೀಡಾ ಪಟು ಹಾಗೂ ಕೋಚ್‌ಗಳ ಅಭಿಪ್ರಾಯವಾಗಿದೆ.