ಚಳ್ಳಕೆರೆ(ಚಿತ್ರದುರ್ಗ):ತಾಲೂಕಿನ ತಳಕು ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಬೆಳಗಿನ ಜಾವ ನಡೆದಿರುವ ಎರಡು ಪ್ರತ್ಯೇಕ ರಸ್ತೆ ಅಪಘಾತಗ ಳಲ್ಲಿ ಮೂವರು ಮೃತಪಟ್ಟಿದ್ದಾರೆ.
ಬಳ್ಳಾರಿ ಮೂಲದ ಕುಟುಂಬವೊಂದು ಬೆಂಗಳೂರಲ್ಲಿ ನಡೆದಿದ್ದ ಉಪನಯನ ಕಾರ‌್ಯಕ್ರಮದಲ್ಲಿ ಭಾಗವಹಿಸಿ ಇನ್ನೋವಾ ಕಾರಿನಲ್ಲಿ ಹಿಂತಿರುಗುವ ವೇಳೆ ರಾ.ಹೆ.150 ಎ ಬೆಸ್ಕಾಂ ಕಚೇರಿ ಸಮೀಪದ ಡಾಬಾದ ಬಳಿ,ಅವರಿದ್ದ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದು,ದಂಪತಿ ಗೋಪಿನಾಥ್(50)ಹಾಗೂ ಲಲಿತಮ್ಮ(42) ಸ್ಥಳದಲ್ಲೇ ಅಸು ನೀಗಿದ್ದಾರೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ,ಮಕ್ಕಳಾದ ಶ್ರೇಯಾ(20)ಶ್ರೀನಿವಾಸ್(11)ಹಾಗೂ ಕಾರು ಚಾಲಕ ಸುರೇಶ್ ಅವರಿಗೆ ಚಳ್ಳಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸಂಭವಿಸಿದ ಕ್ಷಣದಲ್ಲಿ ಏರ್‌ಬಲೂನ್ ಚಾಲಕ ಜೀವ ರಕ್ಷಿಸಿದೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಟಿ.ಬಿ.ರಾಜಣ್ಣ,ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ತಳಕು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವ್ಯಕ್ತಿ ಸಾವು
ಬೆಂಗಳೂರಿಂದ ಚಳ್ಳಕೆರೆ ಮಾರ್ಗ ಯಾದಗಿರಿಗೆ ಭಾನುವಾರ ರಾತ್ರಿ ಟಾಟಾ ಎಸಿಯಲ್ಲಿ ತೆರಳುತ್ತಿದ್ದ ಗಾರೆ ಕೆಲಸಗಾರ ಸಿದ್ದರಾಯ(42)ಎಂಬಾ ತ ಬುಡ್ನಹಟ್ಡಿ ಬಳಿ ವಾಹನದಿಂದ ಬಿದ್ದಿದ್ದು,ಈತನ ಮೇಲೆ ಅಪರಿಚಿತ ವಾಹನ ಮೇಲೆ ಹರಿದು ಮೃತಪಟ್ಟಿದ್ದಾನೆ. ತಳಕು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.