ಕುಳಲಿ ಬಳಿ ಟ್ರ‍್ಯಾಕ್ಟರ್ ಅಪಘಾತವಾಗಿರುವುದು. 
ಜಿಲ್ಲೆ

ಪ್ರತ್ಯೇಕ ಅಪಘಾತ ನಾಲ್ವರ ದುರ್ಮರಣ

ಬಾಗಲಕೋಟೆ: ಜಿಲ್ಲೆಯ ವಿವಿಧೆಡೆ ಸಂಭವಿಸಿದ ಅಪಘಾತದಿಂದ ನಾಲ್ಕು ಜನ ಚಿಕ್ಕ ವಯಸ್ಸಿನವರು ಮೃತಪಟ್ಟಿದ್ದು, ಮುಳಗಡೆ ಜಿಲ್ಲೆಗೆ ಕರಾಳ ಶುಕ್ರವಾರವಾಗಿದೆ.
ಸವದತ್ತಿ ಯಲ್ಲಮ್ಮನ ಗುಡ್ಡದ ಜಾತ್ರೆಗೆ ಹೋಗಿ ಬರ್ತಿದ್ದ ವೇಳೆ ಮುಧೋಳ ತಾಲೂಕಿನ ಕುಳಲಿ ಗ್ರಾಮದ ಸಕ್ಕರೆ ಕಾರ್ಖಾನೆ ಬಳಿ ಟ್ರ‍್ಯಾಕ್ಟರ್ ಪಲ್ಟಿಯಾದ ಪರಿಣಾಮ ಸ್ಥಳದಲ್ಲಿ ಇಬ್ಬರು ಮೃತಪಟ್ಟರೆ, ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾ ಆಸ್ಪತ್ರೆಯಲ್ಲಿ ಓರ್ವ ಮೃತಪಟ್ಟಿದ್ದಾನೆ.

ಟ್ರ‍್ಯಾಕ್ಟರ ಚಾಲಕರಿಬ್ಬರ ಹುಡುಗಾಟಿಕೆ ಮಾಡುತ್ತಾ ಟ್ರ‍್ಯಾಕ್ಟರ ಚಲಾಯಿಸಿದ್ದರಿಂದ ಗೋವಿಂದ ಪಾಟೀಲ(೨೦), ಹನಮಂತ ಬೊಮ್ಮಕ್ಕನವರ (೨೦) ಸ್ಥಳದಲ್ಲಿ ಸಾವನ್ನಪ್ಪಿದರು. ಗಾಯಗೊಂಡಿದ್ದ ಮತ್ತೊಬ್ಬ ಯುವಕ ಸದಾಶಿವ ಬೆಳಗಲಿ (೧೮) ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದವರು. ೧೦ ಕ್ಕೂ ಜನರಿಗೆ ಗಾಯವಾಗಿದೆ. ಎರಡು ಟ್ರ‍್ಯಾಕ್ಟರ್ ಚಾಲಕರು ಓವರ್ ಟೇಕ್ ಮಾಡಲು ಹೋದಾಗ ದುರಂತ ಸಂಭವಿಸಿದೆ. ಮೂರು ಜನರ ಕಾಲಿಗೆ ಬಹಳ ಪೆಟ್ಟು ಬಿದ್ದಿದ್ದು, ಮುಧೋಳ ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಯಾಂಟರ್ -ಬಸ್ ಮುಖಾಮುಖಿ ಓರ್ವ ಸಾವು

ಬಾಗಲಕೋಟೆ: ಲಾರಿ (ಕ್ಯಾಂಟರ) ಹಾಗೂ ಕೆ.ಎಸ್.ಆರ್ಟಿಸಿ ಬಸ್ಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲಿ ಮೃತಪಟ್ಟು, ೧೪ ವಿದ್ಯಾರ್ಥಿಗಳಿಗೆ ಗಾಯಗೊಂಡಿರುವ ಘಟನೆ ತಾಲೂಕಿನ ಗದ್ದನಕೇರಿ ಸಮೀಪದ ಇಟಗಿ ಭೀಮಾಂಬಿಕ ದೇವಸ್ಥಾನ ಬಳಿ ನಡೆದಿದೆ. ರಾಹುಲ್ ಪಾಟೀಲ (೧೭) ಮೃತಪಟ್ಟ ದುರ್ದೈವಿ. ಬೀಳಗಿ ತಾಲೂಕಿನ ಅರಕೇರಿ ಗ್ರಾಮದವನು. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

೧೫ ಎಕರೆ ಕಬ್ಬು ಬೆಂಕಿಗೆ ಆಹುತಿ
ಬಾಗಲಕೋಟೆ: ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ ೧೫ ಎಕರೆ ಕಬ್ಬು ಸುಟ್ಟು ಹೋಗಿರುವ ಘಟನೆ ಜಮಖಂಡಿ ನಗರದ ಹೊರ ವಲಯದ ಕಡಕೋಳ ರಸ್ತೆಯಲ್ಲಿ ನಡೆದಿದೆ. ಬೆಂಕಿ ನಂದಿಸಲು ಅಗ್ನಿ ಶಾಮಕ ದಳ ಸಿಬ್ಬಂದಿ ಹರ ಸಾಹಸಪಟ್ಟ ಬಳಿಕ ಹತೋಟಿಗೆ ಬಂದಿತು. ಕುಮಾರಸ್ವಾಮಿ ಕಂಬಿ, ರಾಜು ಮಾರುತಿ ಘಾರಗೆ, ಅಪ್ಪಾಸಾಹೇಬ ಸಿಂಧೆ ಅವರಿಗೆ ಸೇರಿದ ಕಬ್ಬಿನ ಗದ್ದೆಗಳು ಬೆಂಕಿಗೆ ಆಹುತಿಯಾಗಿವೆ. ಲಕ್ಷಾಂತರ ರೂ. ಮೌಲ್ಯದ ಕಬ್ಬು ಬೆಂಕೆಯಿಂದ ಸುಟ್ಟು ಕರಕಲಾಗಿದೆ. ಜಮಖಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.