ತಿಪಟೂರು: ತಾಲೂಕಿನಲ್ಲಿ ಶುಕ್ರವಾರ ಸಂಭವಿಸಿದ ಒಟ್ಟು ನಾಲ್ಕು ಅಪಘಾಗಳಲ್ಲಿ 5 ಮಂದಿ ಮೃತಪಟ್ಟಿದ್ದು, ತಾಲೂಕಿನ ಜನತೆಗೆ ಕರಾಳ ಶುಕ್ರವಾರವೆನಿಸಿದೆ. ತಾಲೂಕಿನ ಕಸಬಾ ಹೋಬಳಿ ತಡಸೂರು ಗೇಟ್ ಬಳಿ ಆಕ್ಟಿವಾ ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಸಿದ್ದರಾಮದೇವರಪಾಳ್ಯದ ನಿವಾಸಿ ದೊಡ್ಡಶಂಕರಯ್ಯ (71) ಮೃತಪಟ್ಟಿದ್ದಾರೆ. ಇನ್ನೊಂದು ರಸ್ತೆ ಅಪಘಾತದಲ್ಲಿ ತಾಲೂಕಿನ ಅರಳಗುಪ್ಪೆ ಗ್ರಾಮದ ಪ್ರಾಥಮಿಕ ಕೃಷಿ ಸಹಕಾರ ಸಂದ ನಿರ್ದೇಶಕಿ ಪಾರ್ವತಮ್ಮ( 50) ಶುಕ್ರವಾರ ಸಂಜೆ 5&30 ರಲ್ಲಿ ಅಕ್ಟಿವಾ ಬೈಕಿನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿ ಆಲ್ಬೂರು ಕೆರೆ ಏರಿ ಮೇಲೆ ಶುಕ್ರವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ತುರುವೆಕೆರೆ ನಗರದ ವಾಸಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದ ಯೋಗೇಶ್ (24) ಮತ್ತು ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ದಯಾನಂದ್ (23) ಮೃತರು. ಆಲ್ಬೂರು ಕೆರೆ ಏರಿ ಬಳಿ ಬೆಂಗಳೂರಿನಿಂದ ಗುಂಗುರುಮಳೆ ಕಡೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ. ನೊಣವಿನಕೆರೆ ಠಾಣೆ ಪೊಲೀಸರು ಸ್ಥಳ ಪರಿಶೀಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.