ಜಿಲ್ಲೆ

ಪ್ರತಿಷ್ಠಾನದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಭಾರತದ ಸನಾತನ ಧರ್ಮದ ಶ್ರೇಷ್ಠ ಗ್ರಂಥವಾದ ಭಗವದ್ಗೀತೆಯನ್ನು ನೀಡಿ ಸಹಸ್ರ ಸಹಸ್ರ ವರ್ಷಗಳ ಕಾಲ, ಮಾನವನ ಜೀವನ, ಬದುಕು, ಸಾರ್ಥಕತೆಯ ಮೌಲ್ಯಗಳ ಸಂದೇಶವನ್ನು ಸಾರಿದ ಭಗವಂತನಾದ ಶ್ರೀ ಕೃಷ್ಣ ಭಾರತದ ಆಧಾರ ಸ್ತಂಭವೆಂದು ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಋಗ್ವೇದಿ ತಿಳಿಸಿದರು.

ನಗರದ ರಥದ ಬೀದಿಯಲ್ಲಿ ಶನಿವಾರ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ 2010ರಿಂದ ಶ್ರೀಕೃಷ್ಣಪ್ರಜ್ಞೆ ಪರಸರಿಸುತ್ತಾ ಬರಲಾಗಿದೆ. ಈ ಹಿನ್ನೆಲೆಯಲ್ಲಿ ಮೊಸರು ಮಡಿಕೆ ಒಡೆಯುವ ಉತ್ಸವ, ಬಲರಾಮ ಜಯಂತಿ ,ರಾಧಾ ಜಯಂತಿ, ಶ್ರೀ ಕೃಷ್ಣ ಜಯಂತಿ ಆಚರಿಸುವ ಮೂಲಕ ಆಧ್ಯಾತ್ಮಿಕ ಜಾಗೃತಿ ಹಾಗೂ ಮಾನವನ ಕಲ್ಯಾಣಕ್ಕೆ ಹಾಗೂ ಪ್ರತಿಭಾವಿಕಾಸಕ್ಕೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು.

ಪ್ರತಿಷ್ಠಾನದ ಪ್ರದೀಪ್ ಕುಮಾರ್ ದೀಕ್ಷಿತ್, ಯುವ ಮುಖಂಡ ಚಂದ್ರಶೇಖರ್, ಬೆಂಗಳೂರಿನ ಸತೀಶ್, ಬಿ.ಕೆ ಆರಾಧ್ಯ, ರಾಮಪ್ರಸಾದ್, ಸತೀಶ್, ವಿನೋದ್, ಹರದನಹಳ್ಳಿ ಉಮೇಶ್ ಮತ್ತು ವಾಸು ಉಪಸ್ಥಿತರಿದ್ದರು.