ಜಿಲ್ಲೆ

ಪ್ರತಿಯೊಬ್ಬರೂ ರಕ್ತದಾನಕ್ಕೆ ಮುಂದಾಗಲಿ

ರಾಯಬಾಗ: ವೈದ್ಯಕೀಯ ಕ್ಷೇತ್ರವು ಎಷ್ಟೇ ಮುಂದುವರಿದಿದ್ದರೂ ಕೃತಕ ರಕ್ತ ತಯಾರಿಸುವುದು ಅಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು ಎಂದು ಮಾಜಿ ಸಂಸದ ಅಮರಸಿಂಹ ಪಾಟೀಲ ಹೇಳಿದರು.

ಪಟ್ಟಣದ ಎಸ್‌ಪಿಎಂ ಕಾನೂನು ಮಹಾವಿದ್ಯಾಲಯದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ನಿಪ್ಪಾಣಿಯ ರೋಟರಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಡಾ.ಸಿ.ಬಿ.ಕುರಬೇಟ ಮಾತನಾಡಿ, ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಜೀವ ಉಳಿಸಲು ರಕ್ತದಾನ ಮುಖ್ಯ ಎಂದರು. ಶಿಬಿರದಲ್ಲಿ ೧೨೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಟ್ಟು ೫೧ ಯೂನಿಟ್ ರಕ್ತ ಸಂಗ್ರಹಿಸಲಾಯಿತು. ರಕ್ತದಾನಿಗಳಿಗೆ ರೋಟರಿ ಕ್ಲಬ ವತಿಯಿಂದ ಹಣ್ಣು-ಹಂಪಲು, ಪಾನೀಯ ವಿತರಿಸಲಾಯಿತು.

ಎಸ್‌ಪಿಎಂ ಕಾರ್ಯದರ್ಶಿ ಎಸ್.ಎಸ್.ಶಿಂಗಾಡಿ, ಡಾ.ಎಸ್.ಎಸ್.ಬಾನೆ, ಪ್ರಾಚಾರ್ಯ ಎಸ್.ಎಸ್.ಕುರಬೇಟಿ, ಉಪನ್ಯಾಸಕರಾದ ಸಿ.ಎಚ್.ನಾಯಿಕ, ಎಸ್.ಎಂ.ಲೈನದಾರ, ಐ.ಆರ್.ಪತ್ತಾರ, ಎಂ.ಆರ್.ಕಠಾರಿ, ರಾಮು ಕಾಕಡೆ ವೈದ್ಯಕೀಯ ಸಿಬ್ಬಂದಿ ಡಾ.ಅಭಿಜಿತ ಕಾಂಬಳೆ, ದಿಲೀಪ ಪಟ್ಟಾಡೆ, ಶ್ರೀಕಾಂತ ಕಾಸುಪೆ, ವನಿತಾ ಪೂಡಜಾಳೆ, ರಾಜೇಂದ್ರ ಪೂಡಜಾಳೆ, ನಂದಕುಮಾರ ಮೋಹಿತೆ, ಪ್ರೊ.ಪಿ.ಆರ್.ಸವದತ್ತಿ, ಭಾಗ್ಯಶ್ರೀ ಹಿರೇಮಠ, ಸುನೀಲ ತಳ್ಳಕೇರಿ ಇತರರಿದ್ದರು.