ಅಂಕಲಗಿಯಲ್ಲಿ ವನ್ಯಜೀವಿ ಉಳಿವಿಗಾಗಿ ಹಮ್ಮಿಕೊಂಡಿದ್ದ ಉಳವಿ ಪಾದಯಾತ್ರೆಯಲ್ಲಿ ನಿವೃತ್ತ ಆರ್‌ಸಿ ಎಂ.ಜಿ. ಹಿರೇಮಠ ಅವರನ್ನು ಸತ್ಕರಿಸಲಾಯಿತು. ಅಮರಸಿದ್ದೇಶ್ವರ ಶ್ರೀಗಳು, ಭೀಮಗೌಡ ಪೊಲೀಸಗೌಡರ, ರಾಜೇಂದ್ರ ಗೌಡಪ್ಪಗೋಳ ಇದ್ದರು. 
ಜಿಲ್ಲೆ

ಪ್ರತಿಯೊಬ್ಬರೂ ಪ್ರಾಣಿ, ಪರಿಸರ ಪ್ರೀತಿಸಲಿ

ಅಂಕಲಗಿ: ಪರಿಸರ ಜಾಗೃತಿಯಲ್ಲಿ ಅಂಕಲಗಿ ಶರಣರ ಪಾತ್ರ ಸ್ಮರಣೀಯ ಎಂದು ನಿಕಟಪೂರ್ವ ಪ್ರಾದೇಶಿಕ ಆಯುಕ್ತ ಮಹಾಂತೇಶ ಹಿರೇಮಠ ಹೇಳಿದರು.

ಅಂಕಲಗಿಯಲ್ಲಿ ರಮೇಶ ಜಾರಕಿಹೊಳಿ ಅಭಿಮಾನ ಬಳಗ, ಬೆಳಗಾವಿಯ ವನ್ಯಜೀವಿ ಪರಿಸರ ಅಭಿವೃದ್ಧಿ ವೇದಿಕೆ ಆಶ್ರಯದಲ್ಲಿ ವನ್ಯಜೀವಿ ಉಳಿವಿಗಾಗಿ ಗುರುವಾರ ಹಮ್ಮಿಕೊಂಡಿದ್ದ ಉಳವಿ ಪಾದಯಾತ್ರೆಗೆ ಶುಭ ಕೋರಿ ಮಾತನಾಡಿ, ಪ್ರತಿಯೊಬ್ಬರೂ ಪರಿಸರ ಮತ್ತು ಕಾಡು ಪ್ರಾಣಿಗಳನ್ನು ಪ್ರೀತಿಸಬೇಕು ಎಂದರು.

ಅಂಕಲಗಿ ಮಠದ ಅಮರಸಿದ್ದೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಆರ್‌ಸಿ ಎಂ.ಜಿ .ಹಿರೇಮಠ ಮತ್ತು ದಿ.ಎ್.ಒ. ಎಸ್.ಕೆ. ಕಲ್ಲೋಳಕರ ಅವರನ್ನು ಸನ್ಮಾನಿಸಲಾಯಿತು.

ಕೆಜೆಎಸ್ ಕಾರ್ಯದರ್ಶಿ ಭೀಮಗೌಡ ಪೊಲೀಸಗೌಡರ, ರಾಜೇಂದ್ರ ಗೌಡಪ್ಪಗೋಳ, ಉ-ಕರ್ನಾಟಕದ ಲಯನ್ಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಗುರುದೇವ ಸಿದ್ದಾಪೂರಮಠ, ವನ್ಯಜೀವಿ, ಪರಿಸರ ಅಭಿವೃದ್ಧಿ ವೇದಿಕೆ ಪ್ರಧಾನ ಕಾರ್ಯದರ್ಶಿ, ಡಾ.ಡಿ.ಎನ್. ಮಿಸಾಳೆ, ಜಗದೀಶ ಮಠದ, ಈರಣ್ಣ ಮದವಾಲ, ಸಚ್ಚಿದಾನಂದ ಹರದಿ, ಶ್ರೀಧರ ನಿರ್ವಾಣಿ, ಬಿ.ಎಸ್.ಮನಗೂಳಿ, ರುದ್ರಗೌಡ ಮೂಡಗೌಡರ, ಶಂಕರ ಭೂಸನ್ನವರ, ಬಸವರಾಜ ಕೊಳವಿ, ಬಸವರಾಜ ಅಲ್ಲನ್ನವರ, ಅಡವಿಸ್ವಾಮಿ ಶರಣರು ಇತರರಿದ್ದರು.