ಜಿಲ್ಲೆ

ಪ್ರತಿಯೊಬ್ಬರೂ ಪರಿಸರ ಸಂರಕ್ಷಿಸಲಿ

ಐಗಳಿ: ಈ ಜಗತ್ತಿನಲ್ಲಿ ನಿಸ್ವಾರ್ಥವಾದದ್ದು ಎಂದರೆ ನಿಸರ್ಗ ಮಾತ್ರ. ನಿಸರ್ಗವನ್ನು ನಾವು ರಕ್ಷಿಸಿದರೆ ನಿಸರ್ಗ ನಮ್ಮನ್ನು ರಕ್ಷಿಸುತ್ತದೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಶಿಷ್ಯ ಪರಮ ಪೂಜ್ಯ ಶ್ರೀಸಂಗಮೇಶ್ವರ ಸ್ವಾಮೀಜಿ ನುಡಿದರು.

ಐಗಳಿ ಗ್ರಾಮದಲ್ಲಿ ಶಿವನಿಂಗ ಅರಟಾಳ ನಿರ್ಮಿಸಿರುವ ಆಧ್ಯಾತ್ಮಿಕ ವನ ಉದ್ಘಾಟಿಸಿ ಮಾತನಾಡಿದರು.

ಹಿರಿಯರಾದ ಅಪ್ಪಾಸಾಬ ಪಾಟೀಲ, ಪ್ರಕಾಶ ಪಾಟೀಲ, ಅಪ್ಪಾಸಾಬ ಮಾಕಾಣಿ, ಜಗದೀಶ ಕೊರಬು, ಶಿವನಿಂಗ ಅರಟಾಳ, ಶೇಖರ ಬಿರಾದಾರ, ದುಂಡಪ್ಪ ದೊಡಮನಿ, ಹಣಮಂತ ಕರಿಗಾರ, ಟೋಪಣ್ಣ ಅಂಕಲಗಿ, ಸಿದಗೌಡ ಪಾಟೀಲ, ಸದಾಶಿವ ಸಿಂಧೂರ, ಲಕ್ಷ್ಮಣ ತಳವಾರ ಸೇರಿದಂತೆ ಇತರರಿದ್ದರು. ಶಿಕ್ಷಕರಾದ ನಾಗಪ್ಪ ಗುರವ ಸ್ವಾಗತಿಸಿದರು. ವಿಶ್ವನಾಥ ಕಂಬಾಗಿ ನಿರೂಪಿಸಿದರು.