ಮಾಂಜರಿ: ಪ್ರತಿಯೊಬ್ಬರೂ ದೇಶಾಭಿಮಾನ ಹಾಗೂ ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳಬೇಕು ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಕೆಎಲ್ಇ ಸಂಸ್ಥೆಯ ಶ್ರೀಮತಿ ಶಾರದಾ ದೇವಿ ಕೋರೆ ಪ್ರೌಢಶಾಲೆಯಲ್ಲಿ ಶುಕ್ರವಾರ ಎನ್ಸಿಸಿ ಏರ್ವಿಂಗ್ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಕೆಲ ರಾಷ್ಟ್ರಗಳು ಪ್ರತಿ ನಾಗರಿಕ ಒಂದು ವರ್ಷ ದೇಶ ಸೇವೆ ಮಾಡಲು ಕಾನೂನು ರೂಪಿಸಿದೆ. ಅದೇ ಪ್ರಕಾರ ಭಾರತೀಯರು ಯಾವುದೇ ಪದವಿ ಪಡೆದರೂ ದೇಶ ಸೇವೆ ಮಾಡಲು ಕಡ್ಡಾಯವಾಗಿ ಎರಡು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಬೇಕು. ಇದರಿಂದ ಜೀವನದಲ್ಲಿ ಶಿಸ್ತು, ಸಂಯಮ ಹಾಗೂ ಆತ್ಮಧೈರ್ಯ ಬರುತ್ತದೆ ಎಂದು ಹೇಳಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಯುವಕರು ಪ್ರಾಥಮಿಕ ಹಂತದಲ್ಲಿ ಎನ್ಸಿಸಿ ಮೂಲಕ ಭಾರತೀಯ ಸೇವೆಯಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ಗಣತಂತ್ರ ದಿವಸದಂದು ನವದೆಹಲಿಯಲ್ಲಿ ನಡೆಯುವ ಪರೇಡ್ನಲ್ಲಿ ಪ್ರತಿವರ್ಷ ಕೆಎಲ್ಇ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಮುಖ್ಯ ಅತಿಥಿಯಾಗಿ ಎನ್ಸಿಸಿ ಕರ್ನಲ್ ಮೋಹನ್ ನಾಯಕ ಹಾಗೂ ಏರ್ವಿಂಗ್ ಕರ್ನಲ್ ದೀಪಕ ಬಲವಾ ಹಾಗೂ ಪ್ರಾಚಾಯೆರ್ ಜ್ಯೋತಿ ತಮ್ಮಗೌಡ ಮಾತನಾಡಿದರು. ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಸ್ಥಳಿಯ ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಶಿಕರು, ವಿದ್ಯಾರ್ಥಿಗಳು ಇದ್ದರು. ಆರ್.ಎಂ. ರಾಯಮಾನೆ, ವಿಜಯ ನಾಯಕ ಪರಿಚಯಿಸಿದರು. ವಿನಾಯಕ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಾ ಮಾನೆ ನಿರೂಪಿಸಿದರು. ಎಂ.ಆರ್. ನಾಗರಾಜ ವಂದಿಸಿದರು.