filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2621440;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41; 
ಜಿಲ್ಲೆ

ಪ್ರತಿಯೊಬ್ಬರೂ ಉತ್ತಮ ಕ್ರೀಡಾಪಟುಗಳಾಗಲಿ

ಪ್ರಶಾಂತ ಹೂಗಾರ

ತಲ್ಲೂರ: ಪ್ರತಿಯೊಬ್ಬರೂ ಕ್ರೀಡೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಕ್ರೀಡಾಪಟುಗಳಾಗಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ಎ.ವಿ.ಇಂಗಳೆ ಹೇಳಿದರು.

ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಾರ್ತಿಕೋತ್ಸವ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.ಗ್ರಾಪಂ ಮಾಜಿ ಉಪಾಧ್ಯಕ್ಷ ಬಾಬುಗೌಡ ಅಣ್ಣಿಗೇರಿ ಮಾತನಾಡಿ, ಮಾನವನ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಅವಶ್ಯ ಎಂದರು.

ಗ್ರಾಪಂ ಮಾಜಿ ಸದಸ್ಯ ಬಸವರಾಜ ಪೂಜೇರ, ಶಿಕ್ಷಕ ಲೋಕನಾಥ ಪೂಜೇರ, ನಜೀರ್ ಸಾಬರ್, ಮಹಮ್ಮದ್ ಕುದರಿ, ಪ್ರಕಾಶ ನಾಗನೂರ, ಸತೀಶ ಬಾವಿಹಾಳ, ಮಹಾಂತೇಶ ಉಪ್ಪಾರ, ರಾಜು ಉಪ್ಪಿನ, ಗುರುರಾಜ ಚವಾನ್ನವರ, ಆನಂದ ಬೆನಕಟ್ಟಿ, ಬಾಲು ಪತ್ತಾರ, ಅನಿಲ ಸರದಾರ, ಗುರಾ ಆನಿ ಇತರರಿದ್ದರು.