ಶಹಾಪುರ: ಜೀವನದ ಜಂಜಾಟದಿಂದ ಮುಕ್ತಿ ಹೊಂದಬೇಕಾದರೆ ಶ್ರಾವಣ ಮಾಸದಲ್ಲಿ ಅಧ್ಯಾತ್ಮದಲ್ಲಿ ತೊಡಗಿಕೊಳ್ಳಬೇಕು ಎಂದು ಕಡಕೋಳ ಮಡಿವಾಳೇಶ್ವರ ಮಠದ ಶ್ರೀ ರುದ್ರಮುನಿ ಶಿವಾಚಾರ್ಯರು ನುಡಿದರು.
ತಾಲೂಕಿನ ಸಗರ ಗ್ರಾಮದ ದೇಸಾಯಿ ಮಠದಲ್ಲಿ ಹಮ್ಮಿಕೊಂಡ ಸಿದ್ಧರಾಮೇಶ್ವರ ಗದ್ದುಗೆಗೆ ರುದ್ರಾಭಿಷೆೇಕ ಹಾಗೂ ಧರ್ಮಸಭೆ ಉದ್ದೇಶಿಸಿ ಮಾತನಾಡಿ, ಮನುಷ್ಯನಿಗೆ ವಯಸ್ಸಾಗುವುದು ಮುಖ್ಯವಲ್ಲ. ಅನುಭವದ ವಯಸ್ಸು ಆಗಬೇಕು ಅಂದಾಗ ಮಾತ್ರ ಬದುಕು ಹಸನಾಗಲು ಸಾಧ್ಯ ಎಂದರು.
ನಾಗಠಾಣ ಹಿರೇಮಠದ ಶ್ರೀಸೋಮಶೇಖರ ಶಿವಾಚಾರ್ಯ ಮಾತನಾಡಿ, ಮನುಷ್ಯ ಯಾಂತ್ರಿಕ ಬದುಕಿಗೆ ಜೋತುಬಿದ್ದು ಬದುಕಿನ ಸುಖ, ಶಾಂತಿ, ಸಂಪತ್ತು ಮತ್ತು ನೆಮ್ಮದಿ ಹಾಳು ಮಾಡಿಕೊಳ್ಳುತ್ತಿದ್ದಾನೆ. ಎಲ್ಲವನ್ನು ಬಿಟ್ಟು ಅಧ್ಯಾತ್ಮ, ಧಾಮರ್ಿಕ ಚಿಂತನೆಯನ್ನು ಮೈಗೂಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಒಕ್ಕಲಿಗರ ಹಿರೇಮಠದ ಮರುಳ ಮಹಾಂತ ಶಿವಾಚಾರ್ಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾತೋಶ್ರೀ ಶರಣಮ್ಮ ತಾಯಿ, ನೀಲಗಲ್ ಶ್ರೀ ಬಸಯ್ಯ ಸ್ವಾಮೀಜಿ, ಶ್ರೀ ಚನ್ನಮಲ್ಲಿಕಾಜುನ ಸ್ವಾಮೀಜಿ, ದೇವದುರ್ಗದ ಪ್ರಭು ಗುರುಕುಮಾರ ಸ್ವಾಮೀಜಿ, ಮಹಾಂತಗೌಡ ಸುಬೇದಾರ, ಚಂದಪ್ಪ ಸೇರಿ, ಸಂತೋಷ ಗೌಡ ಸುಬೇದಾರ, ಬನ್ನಪ್ಪಗೌಡ ಪಾಟೀಲ್, ಅಮೀನ್ರಡ್ಡಿ ಮಲ್ಲೆದ, ರಾಮರಾವ್ ಕುಲಕಣರ್ಿ, ಶಿವಶರಣಪ್ಪ ನಾಗಲೋಟ ಹಾಗೂ ಇದ್ದರು.