ಚಿಕ್ಕಮಗಳೂರು ಸ್ವಚ್ಚ ಟ್ರಸ್ಟ್ ವತಿ ಯಿಂದ ಭಾನುವಾರ ನಡೆದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಿರೇಮಗಳೂರಿನಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಶುಭ ವಿಜಯ್‌ಕುಮಾರ್, ಬಿ.ಎಂ.ಸಂದೀಪ್, ಡಾ.ಅನಿಕೇತ್ ಮತ್ತಿತರರಿದ್ದರು.
ಚಿಕ್ಕಮಗಳೂರು: ಪ್ರತಿಯೊಬ್ಬರೂ ಪರಿಸರ ಸಂರಕ್ಷಿಸಬೇಕು. ಗಿಡಮರಗಳನ್ನು ಹೆಚ್ಚು ಬೆ ಳೆಸುವುದರಿಂದ ಬಿಸಿಲಬೇಗೆ ಕಡಿಮೆಯಾಗುವ ಜೊತೆಗೆ ಜನರಿಗೆ ಉತ್ತಮ ಆಮ್ಲಜನಕ ದೊರೆಯಲಿದೆ ಎಂ ದು ಸ್ವಚ್ಚ ಟ್ರಸ್ಟ್ ಅಧ್ಯಕ್ಷೆ ಡಾ. ಶುಭ ವಿಜಯ್ ತಿಳಿಸಿದರು.
ನಗರದ ಹಿರೇಮಗಳೂರು ಗ್ರಾಮದ ಹೆದ್ದಾರಿಯ ಮಧ್ಯಭಾಗದಲ್ಲಿ ಚಿಕ್ಕಮಗಳೂರು ಸ್ವಚ್ಚ ಟ್ರಸ್ಟ್ ವತಿ ಯಿಂದ ಭಾನುವಾರ ನಡೆದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮುಂಜಾನೆಯೇ ಕಾಡುಬಾದಾಮಿ, ಹೊಂಗೆ ಮತ್ತು ಬೋಗನ್ ವಿಲ್ಲಾ ಸಸಿಗಳನ್ನು ನೆಟ್ಟು ಮಾತನಾಡಿದರು.
ಮಲೆನಾಡಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಇಂದು ಸುಮಾರು ೪೦೦ಕ್ಕೂ ವಿವಿಧ ತಳಿಗಳ ಸಸಿಗಳನ್ನು ನೆಡಲಾಗುತ್ತಿದೆ. ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ ವಾಗಿದೆ. ಮನೆಯ ಸುತ್ತಲು ಗಿಡಗಳನ್ನು ಬೆಳೆಸುವುದಲ್ಲದೇ ಮನೆಯಲ್ಲಿ ಬಳಸಿದ ನೀರನ್ನು ಮರು ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ಗಿಡಗಳನ್ನು ನೆಟ್ಟು ಇತರರಿಗೂ ಗಿಡ ನೆಡುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕು. ಇದು ಪರಿಸರವನ್ನು ಉಳಿಸುವ ಮಾರ್ಗ. ಪ್ರತಿಯೊಬ್ಬರು ಪ್ಲಾಸ್ಟಿಕ್ ತ್ಯಜಿಸಿ ಬಟ್ಟೆ ಚೀಲಗಳ ನ್ನು ಬಳಸಬೇಕು. ಪ್ರಸ್ತುತ ದಿನಗಳಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಗಿಡ-ಮರಗಳ ಮಾರಣಹೋಮ ನಡೆ ಯುತ್ತಿರುವ ಕಾರಣ ಗಿಡನೆಟ್ಟು ಪೋಷಿಸಬೇಕು ಎಂದರು.
ಟ್ರಸ್ಟ್ ಸದಸ್ಯ ಡಾ. ಅನಿಕೇತ್ ಮಾತನಾಡಿ, ಪರಿಸರದ ಬಗ್ಗೆ ಅರಿವಿದ್ದರೆ ಸಾಲದು. ಪ್ರಜ್ಞೆಯೂ ಇರಬೇಕು. ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು. ಪ್ರಸ್ತುತ ಕಾಲಮಾನದಲ್ಲಿ ಭೂಮಿಯನ್ನು ಉಳಿಸಿಕೊಳ್ಳಬೇಕಾದರೆ ಸಾಧ್ಯವಾದಷ್ಟು ಗಿಡಗಳನ್ನು ನೆಡಬೇಕು. ನಿಮ್ಮ ಎಲ್ಲಾ ಆಚರಣೆಗಳಿಗೆ ಉಡುಗೊರೆಯಾಗಿ ಗಿಡಗಳನ್ನು ಕೊಡಿ ಎಂದು ಸಲಹೆ ನೀಡಿದರು.
ಪರಿಸರ ಮಾಲಿನ್ಯ ಉಂಟಾಗಿ ಭವಿಷ್ಯದಲ್ಲಿ ಶುದ್ಧ ಆಮ್ಲಜನಕವನ್ನು ಕೊಂಡುಕೊಳ್ಳುವ ಪರಿಸ್ಥಿತಿ ಎದುರಾಬಗಬಹುದು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪ್ರತಿಯೊಬ್ಬರು ತಾಯಿಯ ಹೆಸರಿನಲ್ಲಿ ಸಸಿವೊಂದನ್ನು ನೆಟ್ಟು ಪೋಷಿಸಿದರೆ ಪರಿಶುದ್ಧ ಆಮ್ಲಜನಕ ಮನುಷ್ಯನ ಪಾಲಾಗುವ ಜೊತೆಗೆ ಆರೋಗ್ಯಪೂರ್ಣ ಸಮಾ ಜಕ್ಕೆ ಸಹಕರಿಸಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಟ್ರಸ್ಟ್ನ ಸಹ ಕಾರ್ಯದರ್ಶಿ ಪ್ರದೀಪ್ ಗೌಡ, ಸದಸ್ಯರಾದ ಎಚ್.ಬಿ.ಲಕ್ಷ್ಮೀ, ಡಾ. ಅಶ್ವಿನಿ, ಶುಭರಾಮೇಗೌಡ, ಲೇಖಾ, ಅರುಣಾಕ್ಷಿ, ಶಕುಂತಲಾ ಈರಪ್ಪಗೌಡ, ಉಮಾ ನಾಗೇಶ್, ಹರಿಣಾಕ್ಷಿ, ಶುಭರಾಮೇಗೌಡ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ ಮತ್ತಿತರರು ಹಾಜರಿದ್ದರು.