ಜಿಲ್ಲೆ

ಪ್ರತಿಯೊಬ್ಬರು ಒಳ್ಳೆಯ ಮೌಲ್ಯ ಅಳವಡಿಸಿಕೊಳ್ಳಿ ; ಶಂಭುನಾಥ ಸ್ವಾಮೀಜಿ

reportermys

ಹಾಸನ: ಪ್ರತಿಯೊಬ್ಬರೂ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಜನಾಂಗದ ಎಲ್ಲಾ ಮಕ್ಕಳಿಗೂ ಶಿಕ್ಷಣ ನೀಡುವ ಮೂಲಕ ದೇವಾಂಗ ಸಮುದಾಯವನ್ನು ಎತ್ತರಕ್ಕೆ ಬೆಳೆಸುವಂತೆ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಕರೆ ನೀಡಿದರು.

   ನಗರದ ಎಂ.ಜಿ. ರಸ್ತೆಯಲ್ಲಿರುವ  ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆದ್ಯ ವಚನಕಾರ  ದೇವರದಾಸಿಮಯ್ಯ ವೇದಿಕೆ, ಜಿಲ್ಲಾ ದೇವಾಂಗ ನೌಕರರ ಸಂಘದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ದೇವಾಂಗ ಸಮಾಜದ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ತಮ್ಮ ಆಶೀರ್ವಚನ ನೀಡಿದರು.

ಜೀವನದಲ್ಲಿ ಹೆಚ್ಚು ಮೌಲ್ಯ ಅಳವಡಿಸಿಕೊಂಡವರೆ ಅವರು ಮುಂದೆ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮುಬಹುದು. ದೇವರ ದಾಸಿಮಯ್ಯ ಸಮುದಾಯ ಎಂದರೇ ಶಿವನಿಗೆ ಬಟ್ಟೆ ನೀಡಿದ ಸಮುದಾಯವಾಗಿದೆ. ಬಸವಣ್ಣನವರು ಹೇಗೆ ಕಾಯಕವನ್ನು ತಿಳಿಸಿಕೊಟ್ಟರು ಆಗೇ ದೇವರ ದಾಸಿಮಯ್ಯ ಕೂಡ ಕಾಯಕವನ್ನೆ ಅಳವಡಿಸಿಕೊಂಡು ಸಾರಿದವರಾಗಿದ್ದಾರೆ. ಒಂದು ಸಮುದಾಯಲ್ಲಿ ಒಗ್ಗಟ್ಟು ಇದ್ದರೇ ಅನೇಕ ಪ್ರಯೋಜನವನ್ನು ಪಡೆಯಬಹುದಾಗಿದೆ. ದೇವರ ದಾಸಿಮಯ್ಯ ನವರು ತಮ್ಮ ಜೀವಿತವಧಿಯಲ್ಲಿ ಸರಳ ಭಾಷೆಯ ಮೂಲಕ ವಚನಗಳನ್ನು ರಚಿಸಿ ಸಮಾಜವನ್ನು ಶುದ್ಧೀಕರಿಸುವ ಕಾರ್ಯ ಮಾಡಿದರು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತಂದೆ-ತಾಯಂದಿರು ಪ್ರಮುಖ ಪಾತ್ರಧಾರಿಗಳಾಗಿದ್ದು, ಅವರು ಸರಿಯಾದ ದಾರಿಯಲ್ಲಿ ಮಕ್ಕಳನ್ನು ನಡೆಸಿದರೆ, ಅವರ ಭವಿಷ್ಯ ಉಜ್ವಲವಾಗಿರುವುದು ಎಂದು ಹೇಳಿದರು.

  ಮಾಜಿ ಶಾಸಕ ಹಾಗೂ ರಾಜ್ಯ ದೇವಾಂಗ ಸಂಘ ಹಾಗೂ ನೌಕರರ ಒಕ್ಕೂಟದ ಎಂ.ಡಿ. ಲಕ್ಷ್ಮಿನಾರಾಯಣ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ನಮ್ಮ ದೇವಾಂಗ ಸಮಾಜ ಎಂದರೆ  ಸೋಮಾರಿಗಳ ಸ್ವತ್ತಲ್ಲ. ಜ್ಞಾನಹೊಂದಿರುವ ಸಾಧಕರ ಸ್ವತ್ತಾಗಿದೆ. ಮೊದಲು ಜನಾಂಗದ ನಮ್ಮ ಮಕ್ಕಳನ್ನು ಯಾವ ರೀತಿ ಸಮಾಜದಲ್ಲಿ ಎಲ್ಲರಂತೆ ಬಾಳಬೇಕು ಬಗ್ಗೆ ಚಿಂತನೆ ಮೂಲಕ ಜನಾಂಗದಲ್ಲಿ ಉತ್ತಮ ವಾತವರಣ ನಿರ್ಮಾಣ ಮಾಬೇಕಾಗಿದೆ. ಜನಾಂಗದಲ್ಲಿ ಪ್ರತಿ ಮಕ್ಕಳಿಗೆ ಶಿಕ್ಷಣ ನೀಡಿ ಮುಂದೆ ಅವರಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇರುತ್ತದೆ ಎಂಬುದನ್ನು ಗುರುತಿಸಿ ಪ್ರೋತ್ಸಹಿಸುವ ಕೆಲಸ ಮಾಡಬೇಕಾಗಿದೆ ಎಂದು ಕಿವಿಮಾತು ಹೇಳಿದರು. 

ಬಹಳಷ್ಟು ಮನೆಗಳಲ್ಲಿ ನಮ್ಮ ಮಗನು ಡಿಸಿ, ಡಾಕ್ಟರ್, ಇಂಜಿನಿಯರ್, ತಹಸೀಲ್ದಾರ್ ಆಗಬೇಕೆಂಬ ಆಸೆಯನ್ನಿಟ್ಟುಕೊಂಡಿರುವುದು ಸಹಜ. ಆದರೇ ಶಿಕ್ಷಣಕ್ಕೆ ಮೊದಲ ಆಧ್ಯತೆ ನೀಡಿ ನಂತರದಲ್ಲಿ ಮುಂದಿನ ಯೋಚನೆಯತ್ತ ಗಮನ ಕೊಡುವುದು ಸೂಕ್ತ ಎಂದರು.

ಮಾನವನಾಗಿ ಹುಟ್ಟಿದ ಮೇಲೆ ಹೃದಯ ಶ್ರೀಮಂತಿಕೆಯನ್ನು ಹೆಚ್ಚು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅನೇಕರು ಇದ್ದು, ಸೇವೆಯಂತಹ ಕಾಯಕದಲ್ಲಿ ತಿಡಗಿರುವುದು ಶ್ಲಾಘನೀಯವಾಗಿದೆ. ಯುವ ಪೀಳಿಗೆಯು ಉನ್ನತ ಹುದ್ದೆಯನ್ನು ಅಲಂಕರಿಸಿ ಸೇವಾ ಮನೋಭಾವ ಬೆಳೆಸಿಕೊಳ್ಳುವಂತೆ ಇದೆ ವೇಳೆ ಕರೆ ನೀಡಿದರು. ದೇವರ ದಾಸಿಮಯ್ಯ ನೇಕಾರರಾದ್ದರಿಂದ ಜೇಡರ ದಾಸಿಮಯ್ಯ ಎನ್ನಲಾಗುತ್ತಿತ್ತು. ಜೇಡರ ದಾಸಿಮಯ್ಯ ಎಂದು ಹೇಳಲಾಗುತ್ತದೆ. ಅದೇ ರೀತಿ ದೇವರ ದಾಸಿಮಯ್ಯ ಎಂದೂ ಹೆಸರಿಸಲಾಗುತ್ತದೆ ಎಂದು ಹೇಳಿದರು.

   ಇದೆ ವೇಳೆ ದೇವಾಂಗ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾಪುರಸ್ಕಾರ ನೆರವೇರಿಸಿ ನಿವೃತ್ತ ನೌಕರರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಂಪೆ ಹೇಮಕೂಟದ ಪೀಠಾಧೀಶರಾದ ಶ್ರೀ ದಯಾನಂದ ಪುರಿ ಸ್ವಾಮೀಜಿ ದಿವ್ಯ ಸಾನಿಧ್ಯವನ್ನು ವಹಿಸಿ ಹಿತಾವಚನ ನುಡಿದರು.
ಈಸಂದರ್ಭದಲ್ಲಿ ಜಿಲ್ಲೆ ದೇವಾಂಗ ನೌಕರರ ಸಂಘದ ಅಧ್ಯಕ್ಷ  ಬಿ. ಸೋಮಶೇಖರ್, ಜಿಲ್ಲಾ ದೇವಾಂಗ ನೌಕರ ಸಂಘದ ಗೌರವಾಧ್ಯಕ್ಷ  ಜಿ ಎಸ್ ಸತೀಶ್, ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲ್ಬುರ್ಗಿ, ವಿ.ಎ. ನಂಜುಂಡಸ್ವಾಮಿ, ಜಿ. ರಮೇಶ್, ಕೆ. ಧರ್ಮೇಶ್, ವಾಣಿಜ್ಯ ತೆರಿಗೆ ಇಲಾಖೆಯ ಲೋಕೇಶ್, ವಿಜಯಲಕ್ಷ್ಮಿ ಕ್ರಷರ್ ಮಾಲೀಕರಾದ ಪುಷ್ಪ ವಸಂತಕುಮಾರ್, ತಾಪಂ ಮಾಜಿ ಅಧ್ಯಕ್ಷ ರಂಗಶೆಟ್ರು , ಗೊರೂರು ಶಿವೇಶ್, ನಾಗರಾಜ್, ಭರತ್  ಇತರರು ಇದ್ದರು.