ಹುಲಸೂರು: ಭಾರತದ ಪ್ರತಿಯೊಬ್ಬರಲ್ಲೂ ನಮ್ಮ ದೇಶ, ನಾಡಿನ ಬಗ್ಗೆ ಅಭಿಮಾನ, ಪ್ರೇಮ ಮೂಡಬೇಕು ಎಂದು ತಹಸೀಲ್ದಾರ್ ಶಿವಾನಂದ ಮೇತ್ರೆ ಹೇಳಿದರು. ಪಟ್ಟಣದಲ್ಲಿ ತಾಲೂಕು ಆಡಳಿತ ಮಂಗಳವಾರ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಮಾತನಾಡಿ, ತಾಲೂಕಿನ ಹೆಸರು ರಾಷ್ಟç, ರಾಜ್ಯ ಮಟ್ಟದಲ್ಲಿ ಬರುವಂತೆ ಶ್ರಮಿಸಬೇಕಿದೆ. ವಿದ್ಯಾರ್ಥಿಗಳು ಅಧ್ಯಯನ ಮಾಡಿ ಉತ್ತಮ ಫಲಿತಾಂಶ ತರಬೇಕು ಎಂದರು. ಪ್ರಾಧ್ಯಾಪಕ ಸುರೇಶ ಅಕ್ಕಣ್ಣ ಮಾತನಾಡಿದರು. ತಾಪಂ ಇಒ ಮಹಾದೇವ ಬಂಬಳಗೆ, ಗ್ರಾಪಂ ಅಧ್ಯಕ್ಷ ಸಂಜುಕುಮಾರ ಭುಸಾರೆ, ಉಪಾಧ್ಯಕ್ಷೆ ಸರಸ್ವತಿ ಬಿ., ಪಿಡಿಒ ಸಂದೀಪ ಬಿರಾದಾರ, ಸಿಆರ್‌ಪಿ ಮಾರುತಿ ಬೇಂದ್ರೆ, ಪ್ರಮುಖರಾದ ಭಗವಾನರಾವ ಕುಲಕರ್ಣಿ, ಉದಯರಾಜ ಪಾರಶೆಟ್ಟೆ ಇತರರಿದ್ದರು. ಕಸಾಪ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ ಸ್ವಾಗತಿಸಿ ನಿರೂಪಣೆ ಮಾಡಿದರು.