ಮಸಬಹಂಚಿನಾಳದಲ್ಲಿ ನರೇಗಾ ಕೂಲಿಕಾರರಿಗೆ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಾಪಂ ಇಒ ರಾಮಣ್ಣ ದೊಡ್ಮನಿ ಮಾತನಾಡಿದರು. ಪಿಡಿಒ ವೈಜನಾಥ ಸಾರಂಗಮಠ, ಕಾರ್ಯದರ್ಶಿ ಶೇಖರಪ್ಪ ಚಿಂಚಿಲಿ, ವೈದ್ಯಾಧಿಕಾರಿ ಪ್ರಕಾಶ ಇತರರಿದ್ದರು. 
ಜಿಲ್ಲೆ

ಪ್ರತಿಯೊಬ್ಬ ಕೂಲಿ ಕಾರ್ಮಿಕರು ಆರೋಗ್ಯದ ಕಾಳಜಿವಹಿಸಿ

ಕುಕನೂರು: ಕೂಲಿ ಕಾರ್ಮಿಕರು ಕೆಲಸ ಜತೆಗೆ ಆರೋಗ್ಯದ ಕಡೆಯೂ ಗಮನಹರಿಸಬೇಕು ಎಂದು ತಾಪಂ ಇಒ ರಾಮಣ್ಣ ದೊಡ್ಮನಿ ಹೇಳಿದರು.


ಮಸಬಹಂಚಿನಾಳದಲ್ಲಿ ಗ್ರಾಪಂನಿಂದ ನರೇಗಾ ಕೂಲಿಕಾರರಿಗೆ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಶುಕ್ರವಾರ ಮಾತನಾಡಿದರು. ಗ್ರಾಮೀಣ ಪ್ರದೇಶದ ಜನರು ಕೆಲಸ ಒದಗಿಸುವ ಮಹಾತ್ವಾಕಾಂಕ್ಷಿ ಯೋಜನೆ ನರೇಗಾದ ಪ್ರಯೋಜನ ಪಡೆದುಕೊಳ್ಳಬೇಕು. ಪ್ರಸಕ್ತ ವರ್ಷ 7 ರೂ. ಹೆಚ್ಚಿಸಿದ್ದು, ದಿನಗೂಲಿ 316 ರೂ. ನೀಡಲಾಗುತ್ತದೆ.

ಪುರುಷ, ಮಹಿಳೆಯರಿ ಸಮಾನ ಕೂಲಿ

ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೂಲಿ ನೀಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ತೊಡಗಿಸಿಕೊಳ್ಳಬೇಕು. ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ ಕೆಲಸದ ಪ್ರಮಾಣದಲ್ಲಿ ಕಡಿತ ಮಾಡಲಾಗಿದೆ ಎಂದ ಅವರು, ಸಾರ್ವಜನಿಕರು, ಕೂಲಿಕಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಎಲ್ಲರೂ ಕಡ್ಡಾಯವಾಗಿ ಮೇ 10 ರಂದು ಮತದಾನ ಮಾಡಬೇಕು ಎಂದರು. ಪಿಡಿಒ ವೈಜನಾಥ ಸಾರಂಗಮಠ, ಕಾರ್ಯದರ್ಶಿ ಶೇಖರಪ್ಪ ಚಿಂಚಿಲಿ, ವೈದ್ಯಾಧಿಕಾರಿ ಪ್ರಕಾಶ ಇತರರಿದ್ದರು.