ಬಸವಕಲ್ಯಾಣ: ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಗ್ರಾಮೀಣ ಭಾಗದ ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಅವಶ್ಯ ಎಂದು ಪ್ರೌಢ ಶಾಲೆ ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶೇಖ ಮಹೆಬೂಬ್ ಪಟೇಲ್ ಹೇಳಿದರು.
ರಾಜ್ಯ ಪ್ರೌಢ ಶಾಲೆ ಸಹ ಶಿಕ್ಷಕರ ಸಂಘ ಬಸವಕಲ್ಯಾಣ ಹಾಗೂ ಹುಲಸೂರ ತಾಲೂಕು ಘಟಕಗಳ ಆಶ್ರಯದಲ್ಲಿ ನೀಲಾಂಬಿಕಾ ಕಾಲೇಜಿನಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ಸುಪ್ರಿಯಾ ಕಾಳೆ, ಪತ್ರಕರ್ತರ ಸಂಘದ ಪದಾಧಿಕಾರಿಗಳ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಸಂಘದ ತಾಲೂಕು ಅಧ್ಯಕ್ಷ ಯೋಗರಾಜ ಕೆ.ಮಾತನಾಡಿ, ಘೋಟಾಳ ಸರ್ಕಾರಿ ಶಾಲೆಯಲ್ಲಿ ಕಲಿತ ಪ್ರತಿಭಾನ್ವಿತ ವಿದ್ಯಾರ್ಥಿನಿ ನೀಟ್‌ನಲ್ಲಿ ಸಾಧನೆ ಮಾಡಿದ್ದರೂ ಬಡತನ ಅಡ್ಡಿಯಾದ ವಿಷಯ ತಿಳಿದು ಶಿಕ್ಷಕ ವಿಜಯಕುಮಾರ ಮಾನೆ ಅವರು ಸಮಸ್ಯೆಗೆ ಪರಿಹಾರಕ್ಕೆ ಯೋಜಿಸಿದರು. ಅದಕ್ಕೆ ಅದ್ಭುತ ಸ್ಪಂದನೆ ದೊರಕಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ರೆಡ್ಡಿ ಮಾಲಿ ಪಾಟೀಲ್, ಕಾರ್ಯನಿಯರ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಾರ್ಥಂಡ ಜೋಷಿ, ಹುಲಸೂರು ಅಧ್ಯಕ್ಷ ರಾಜಕುಮಾರ ಹೊನ್ನಾಡೆ, ಎಜಿಟಿ ಶಿಕ್ಷಕರ ಸಂಘದ ಅಧ್ಯಕ್ಷ ರಾಜಕುಮಾರ ಬಿರಾದಾರ, ಎನ್‌ಪಿಎಸ್ ಸಂಘದ ಅಧ್ಯಕ್ಷ ಮಾಧವ ಗಣೇಶ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಉಪಾಧ್ಯಕ್ಷ ರಮೇಶ ಉಮಾಪೂರೆ, ವಿಜ್ಞಾನ ಪರಿಷತ್ ಜಿಲ್ಲಾಧ್ಯಕ್ಷ ಸುರೇಂದ್ರನಾಥ ಹುಡುಗಿಕರ್ ಮಾತನಾಡಿದರು. ಪ್ರಕಾಶ ವಾಡೆಕರ್ ಸ್ವಾಗತಿಸಿದರು. ಸಂಘದ ಹುಲಸೂರು ಘಟಕದ ಅಧ್ಯಕ್ಷ ಸೂರ್ಯಕಾಂತ್ ಅಡಕೆ ವಂದಿಸಿದರು. ಬಸವರಾಜ ಮಾನೋಳೆ ನಿರೂಪಿಸಿದರು.
ನವನಾಥ ದೇಶಮುಖ್, ಚಂದ್ರಕಾಂತ ಕಿವಡೆ, ರಮೇಶ ರಾಜೋಳೆ, ವಿಜಯಕುಮಾರ ಮಾನೆ, ಶರದ್ ನಾರಾಯಣಪೆಟ್ಕರ್, ಸುಧಾಕರ ಮೂಳೆ, ಮಾಧವ, ಸುನಿತಾ ರೆಡ್ಡಿ, ವಸಂತ ರೆಡ್ಡಿ, ಬಾಲಕೃಷ್ಣ ಪಾಟೀಲ್, ಮದನಕುಮಾರ ಪಾಟೀಲ್, ಅಶೋಕ ಚವ್ಹಾಣ್ ಇತರರಿದ್ದರು.