ಜಿಲ್ಲೆ

ಪ್ರತಿಭೆಗೆ ಉತ್ತಮ ಅವಕಾಶ

‌ಬಳ್ಳಾರಿ : ಪ್ರತಿಭಾ ಸಂಗಮ ಮಕ್ಕಳ ಅದ್ಭುತ ಪ್ರತಿಭೆಗೆ ಉತ್ತಮ ಅವಕಾಶವಾಗಿದೆ. ಶಾಲಾ ಮಕ್ಕಳು ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಬಿಪಿಎಸ್ ಸಿ ಶಾಲೆಯ ಅಧ್ಯಕ್ಷ ಡಾ.ಎಸ್.ಜೆ.ವಿ. ಮಹಿಪಾಲ್ ಹೇಳಿದರು
ನಗರದ ಬಿಪಿಎಸ್ ಸಿ ಶಾಲಾ ಅವರಣದಲ್ಲಿ ಭಾರತೀಯ ಸಂಸ್ಕ್ರತಿ ಉತ್ಸವ ಅಂಗವಾಗಿ ಕಲ್ಯಾಣ ಕರ್ನಾಟಕ ವಿಕಾಸ ಅಕಾಡಮಿ, ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಮತ್ತು ಬಸವರಾಜೇಶ್ವರಿ ಸ್ಕೂಲ್ ಜಂಟಿಯಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ವಿವಿಧ ಸ್ಪರ್ಧೆಗಳ ಪ್ರತಿಭಾ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಪ್ರತಿಭೆ ಹೊರ ಬರಲು ಶಿಕ್ಷಕರ ಪ್ರೀತಿಯ ಹಾಗೂ ಶೈಕ್ಷಣಿಕ ಬೋಧನೆ ವಿದ್ಯಾರ್ಥಿಗಳ ಪ್ರಾಮಾಣಿಕ ಪ್ರಯತ್ನ ಅವಶ್ಯವಾಗಿದೆ ಎಂದರು.ಬಳಿಕ‌ ವಿದ್ಯಾರ್ಥಿಗಳಿಂದ ಭಾಷಣ, ಚಿತ್ರಕಲೆ, ರಸಪ್ರಶ್ನೆ, ಹಗ್ಗ ಜಗ್ಗಾಟ, ಕೋಲಾಟ, ಭಜನೆ, ರಂಗೋಲಿ, ಸಮೂಹ ನೃತ್ಯ, ಗಾಯನ, ಕಥೆ ಹೇಳುವ ಸ್ಪರ್ಧೆ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು, ಮಹಿಳೆಯರು ಹಾಗೂ ಪುರುಷರು ಉತ್ಸಾಹದಿಂದ ಭಾಗವಹಿಸಿದ್ದರು.