ಚಿಟಗುಪ್ಪ: ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸಹಕಾರಿಯಾಗಿವೆ. ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮುತ್ತಂಗಿ ಸರ್ಕಾರಿ ಪ್ರೌಢ ಶಾಲೆ ಮುಖ್ಯಗುರು ವಿಜಯಕಲಾ ಹೇಳಿದರು.
ಮುತ್ತಂಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಬೇಕು ಎಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮಾರ್ತಾಂಡ, ಹಿರಿಯ ಶಿಕ್ಷಕ ಪ್ರಕಾಶ, ಸಿಆರ್‌ಪಿ ಪ್ರಭು ಕುಂಬಾರ ಮಾತನಾಡಿದರು. ಪ್ರಮುಖರಾದ ಸೊಲ್ಲಪ್ಪ, ಸಂಜುಕುಮಾರ ಕಿರಣ, ಸುರೇಶ ಕುದುರೆ, ಚೇತನ, ಬಸವರಾಜ ಬಣಗಾರ, ವಿಜಯಕಲಾ, ಪ್ರಭು, ರೇಣುಕಾ, ಚಂದ್ರಕಾAತ, ರಾಜಣ್ಣ ಇತರರಿದ್ದರು.