ಜಿಲ್ಲೆ

ಪ್ರತಿಭೆ ಹೊರತೆಗೆಯಲು ಪ್ರತಿಭಾ ಕಾರಂಜಿ ವೇದಿಕೆ

ನಗರ್ಲೆ: ನಂಜನಗೂಡು ತಾಲೂಕಿನ ನಗರ್ಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮವನ್ನು ತಾಲೂಕು ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮ ರತ್ನಾಕರ್ ಉದ್ಘಾಟಿಸಿ ಮಾತನಾಡಿ, ಪ್ರತಿಭಾ ಕಾರಂಜಿ ಕಾರ್ಯಕ್ರಮ ಮಕ್ಕಳ ಪ್ರತಿಭೆಯನ್ನು ಹೊರ ತೆಗೆಯಲು ಉತ್ತಮ ವೇದಿಕೆಯಾಗಿದೆ. ಶಾಲಾ ಮಕ್ಕಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ತಮ್ಮ ಪ್ರತಿಭೆಯನ್ನು ಪ್ರಸ್ತುತಪಡಿಸುವ ಕಡೆ ಹೆಚ್ಚು ಗಮನಹರಿಸಬೇಕು.ಆಗ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ವಿವಿಧ ವೇಷ ಧರಿಸಿ ರಂಜಿಸಿದರು. ಮುಖ್ಯ ಶಿಕ್ಷಕಿ ವಿಜಯಾ ಅಧ್ಯಕ್ಷತೆ ವಹಿಸಿದ್ದರು. ಇಸಿಒ ಸಿದ್ದರಾಜು, ಬಿಆರ್‌ಪಿ ಪ್ರಭಾವತಿ, ಸಿಆರ್‌ಪಿ ನಾಗಲಕ್ಷ್ಮೀ, ಬಿಳಿಗೆರೆ ಸಿಆರ್‌ಪಿ ನಾಗರಾಜು, ತಾಲೂಕು ಶಿಕ್ಷಕರ ಸಂಘದ ಕಾರ್ಯದರ್ಶಿ ಸೋಮೇಶ್, ಸಹ ಕಾರ್ಯದರ್ಶಿ ಶಕೀಲ್ ಬಾಷ, ಆಲಂಬೂರು ಶಾಲೆಯ ಮುಖ್ಯ ಶಿಕ್ಷಕ್ಷಕರಾದ ಮೀನಾಕ್ಷಿ, ಸುಬ್ಬಶೆಟ್ಟಿ, ಹನಿಯಂಬಳ್ಳಿ ಶಿಕ್ಷಕರಾದ ಮಹದೇವಯ್ಯ ಸೇರಿದಂತೆ ಎಲ್ಲ ಶಾಲೆಯ ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು.