ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ.ವೈ.ಸರ್ಕಾರಿ ಪ್ರೌಢಶಾಲೆಯಲ್ಲಿ ಅಜ್ಜಪ್ಪ ಗಿರಡ್ಡಿ ಕ್ರೀಡಾಜ್ಯೋತಿ ಸ್ವಾಗತಿಸಿದರು. ಪ್ರಕಾಶ ಅಡಿವಿನ್ನವರ, ಹನುಮಂತ ಬಿಳ್ಳೂರ, ಪ್ರಕಾಶ ಪಾಟೀಲ, ಪದ್ಮಣ್ಣ ಉಪ್ಪಿನ, ಸಿದ್ದಪ್ಪ ಡೊಂಬರ, ಚನ್ನಪ್ಪ ಚೌಗಲಾ, ಸುನೀಲ ಗಿರಡ್ಡಿ, ಎ.ಎಲ್.ತಹವಿಲ್ಲದಾರ ಇತರರಿದ್ದರು. 
ಜಿಲ್ಲೆ

ಪ್ರತಿಭೆ ವ್ಯಕ್ತವಾಗಲು ವೇದಿಕೆ ಅಗತ್ಯ

ರಾಘವೇಂದ್ರಗೌಡ ಭೀ ಪಾಟೀಲ್

ಮೂಡಲಗಿ: ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಎ.ಜುನೇದ್ ಪಟೇಲ್ ಹೇಳಿದರು.

ತಾಲೂಕಿನ ಹುಣಶ್ಯಾಳ ಪಿ.ವೈ. ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಏರ್ಪಡಿಸಿದ್ದ ತಾಲೂಕುಮಟ್ಟದ ವಾಲಿಬಾಲ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ಪ್ರತಿಭೆ ಹೊರಹಾಕಲು ವಿದ್ಯಾರ್ಥಿಳಿಗೆ ಕ್ರೀಡಾಕೂಟ ಉತ್ತಮ ವೇದಿಕೆ ಎಂದರು.

ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅಜ್ಜಪ್ಪ ಗಿರಡ್ಡಿ ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿ, ಯುವಜನಾಂಗ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಮುಖ್ಯೋಪಾಧ್ಯಾಯ ಎನ್.ಬಿ.ನಿಪ್ಪಾಣಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಪ್ರಕಾಶ ಅಡಿವಿನ್ನವರ, ಎಸ್‌ಡಿಎಂಸಿ ಸದಸ್ಯ ಹನುಮಂತ ಬಿಳ್ಳೂರ, ಗ್ರಾಪಂ ಸದಸ್ಯರಾದ ಪ್ರಕಾಶ ಪಾಟೀಲ, ಪದ್ಮಣ್ಣ ಉಪ್ಪಿನ, ಸಿದ್ದಪ್ಪ ಡೊಂಬರ, ಚನ್ನಪ್ಪ ಚೌಗಲಾ, ಸುನೀಲ ಗಿರಡ್ಡಿ, ಎ.ಎಲ್.ತಹವಿಲ್ಲದಾರ ಇತರರು ಇದ್ದರು. ವಿಜಯಲಕ್ಷ್ಮೀ ಚೌಗಲಾ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಶಿಲ್ಪಾ ಸಾರಾಪುರ, ಯಲ್ಲವ್ವ ಹುದ್ದಾರ ಪ್ರಾರ್ಥಿಸಿದರು. ಲಕ್ಷ್ಮೀ ರಡ್ರಟ್ಟಿ ವಂದಿಸಿದರು.