ಸಿರಿಗೇರಿ: ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಸಿಕ್ಕಾಗ ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ಪಿಎಸ್‌ಐ ಎಚ್.ಸದ್ದಾಂ ಹುಸೇನ್ ಹೇಳಿದರು.
ಇಲ್ಲಿನ ವಿವೇಕಾನಂದ ಪ್ರೌಢ ಶಾಲೆಯ ಆವರಣದಲ್ಲಿ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಸೋತವೆಂದು ಪ್ರಯತ್ನ ನಿಲ್ಲಿಸಬಾರದು ಎಂದು ಸಲಹೆ ನೀಡಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರೆಹಮತ್ ಉಲ್ಲಾ ಮಾತನಾಡಿ, ನಿರ್ಣಾಯಕರು ಪಾರದರ್ಶಕವಾಗಿ ತೀರ್ಪು ನೀಡಬೇಕು. ಆಟದ ಮಧ್ಯದಲ್ಲಿ ಅನುಚಿತ ವರ್ತನೆ ತೋರಿದಲ್ಲಿ ಅಂಥ ತಂಡಗಳನ್ನು ಹೊರ ಹಾಕಲಾಗುವುದು ಎಂದು ತಿಳಿಸಿದರು.
ಮುಖ್ಯಶಿಕ್ಷಕ ಎನ್.ಪಂಪಾಪತಿ ಮಾತನಾಡಿದರು. ಸಿರಿಗೇರಿ ವಲಯ ಕ್ರೀಡಾ ವ್ಯವಸ್ಥಾಪಕ ಕೃಷ್ಣಮೂರ್ತಿ, ಅಬ್ದುಲ್ ಸೂಕುರು, ಮುಖ್ಯಶಿಕ್ಷಕರಾದ ಕೆ.ವೀರಪ್ಪ,ಪರ್ವೇಜ್ ಅಹ್ಮದ್, ಕಾರೆ ಶಾಂತಮ್ಮ, ಸಂಸ್ಥೆಯ ಖಜಾಂಚಿ ವೀರೇಶಪ್ಪ, ಸದಸ್ಯ ಗೋಡೆ ಪಂಪಾಪತಿ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರಾದ ಮಲ್ಲಿಕಾರ್ಜುನ, ಉಪೇಂದ್ರ, ಚನ್ನಪ್ಪ, ರಮೇಶ್, ಬಿಆರ್‌ಸಿಗಳಾದ ವೀರೇಶಪ್ಪ, ಕಾಳಿಂಗಪ್ಪ, ಲಕ್ಷ್ಮಣ್, ಶಿಕ್ಷಕರಾದ ಮಹಾಬಲೇಶ್, ಶಿವಕುಮಾರ್, ರಂಜಿತ್ ಇದ್ದರು.