ತೀರ್ಥಹಳ್ಳಿ: ಬದ್ಧತೆಯುಳ್ಳ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅವರ ಕುಟುಂಬ ಮಾತ್ರವಲ್ಲದೆ ಇಡೀ ಸಮಾಜದ ಉದ್ಧಾರವೂ ಆಗುತ್ತದೆ. ಪ್ರತಿಭಾವಂತರನ್ನು ಗುರುತಿಸಿ ಅವರನ್ನು ಉತ್ತೇಜಿಸುವ ಆ್ ಕಂಪನಿ ಅವರ ಸಮಾಜಮುಖಿ ಚಿಂತನೆ ಪ್ರಶಂಸನೀಯ ಎಂದು ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ದೇವರಾಜ್ ಹೇಳಿದರು.
ನ್ಯಾಷನಲ್ ಗ್ರೂಪ್ ಮಾಲೀಕ ಹಾಜಿ ಷೇಕ್ ಅಹ್ಮದ್ ಚಾರಿಟಬಲ್ ಟ್ರಸ್ಟ್‌ನಿಂದ ಭಾನುವಾರ ಪಟ್ಟಣದ ವಿದ್ಯಾಧಿರಾಜ ಸಭಾಭವನದಲ್ಲಿ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ 16ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ, ಒಂದು ಮಗು ಕಲಿತರೆ ಆತನ ಕುಟುಂಬದ ಏಳಿಗೆ ಮಾತ್ರವಲ್ಲದೆ ಸಮಾಜದ ಏಳಿಗೆಯಲ್ಲೂ ಸಹಕಾರಿಯಾಗಲಿದೆ. ಪ್ರತಿಭಾವಂತರಲ್ಲಿ ಮಾನವೀಯ ಗುಣಗಳೂ ಉದ್ದೀಪನಗೊಳ್ಳುವುದು ಮುಖ್ಯ ಎಂದರು.
ಸಂಸ್ಥೆಯ ಪಾಲುದಾರ ಡಿ.ಎಸ್.ಅಬ್ದುಲ್ ರೆಹಮಾನ್ ಮಾತನಾಡಿ, ಸಂಸ್ಥೆಯು 2009ರಿಂದ ಸತತವಾಗಿ ಈ ಯೋಜನೆಯನ್ನು ನಡೆಸಿಕೊಂಡು ಬಂದಿದೆ. ಗ್ರಾಮೀಣ ಭಾಗದ ಬಡ ಮಕ್ಕಳಿಗೆ ದುರ್ಲಭವಾಗಿರುವ ಸಿಇಟಿ, ನೀಟ್ ತರಬೇತಿಯನ್ನು ಮುಂದಿನ ದಿನಗಳಲ್ಲಿ ನೀಡಲು ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.
ಪಾಲುದಾರ ಹೈದರ್ ಮಾತನಾಡಿ, ಈ ಯೋಜನೆಯಲ್ಲಿ ಈವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಸುಮಾರು 50 ಲಕ್ಷ ರೂ. ಪ್ರೋತ್ಸಾಹ ಧನ ನೀಡಿದ್ದೇವೆ. ಈ ದಿನ 307 ವಿದ್ಯಾರ್ಥಿಗಳಿಗೆ 12 ಲಕ್ಷ ರೂ.ಗಳ ಪ್ರೋತ್ಸಾಹ ಧನ ನೀಡುತ್ತಿದ್ದೇವೆ ಎಂದರು.
ಸಂಸ್ಥೆಯ ಪಾಲುದಾರರಾದ ಇಬ್ರಾಹಿಂ ಷರ್ೀ, ಅಬ್ದುಲ್ ಕಲಾಂ, ಕಬೀರ್, ಕೆನರಾ ಬ್ಯಾಂಕ್ ಮ್ಯಾನೇಜರ್ ಸೌರಭ್, ಶಿಕ್ಷಕರಾದ ಎಂ.ಜಿ.ಸ್ವಾಮಿ, ಮಂಜುನಾಥ ಮಲ್ಯ ಇದ್ದರು.