ಭಾಲ್ಕಿ: ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ, ಕಲೋತ್ಸವ ಸಹಕಾರಿ ಎಂದು ಅಕ್ಷರ ದಾಸೋಹ ಅಧಿಕಾರಿ ಮಲ್ಲಿನಾಥ ಸಜ್ಜನ್ ಹೇಳಿದರು.
ಪಟ್ಟಣದ ಸೇವಂತ್ ಡೇ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ ಎಂದರು.
ಕ್ಲಸ್ಟರ್ ಅಧಿಕಾರಿ ಅಂಬರೀಶ ಖಂಡ್ರೆ ಪ್ರಾಸ್ತಾವಿಕ ಮಾತನಾಡಿದರು. ಎಸ್‌ಡಿಎ ಪ್ರಾಚಾರ್ಯ ಶೈಲೇಷ ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಸಿಆರ್‌ಪಿ ಸೋಮನಾಥ ವರ್ಧಾ, ಕುಸುಮಕುಮಾರಿ ರೆಡ್ಡಿ, ನಿರಂಜಪ್ಪ ಪಾತ್ರೆ, ಭೀಮಣ್ಣ ಕೊಂಕಣೆ, ಗೋವಿಂದ ಬಿರಾದಾರ, ಮೈತ್ರಾದೇವಿ, ಅನಿಲ ಗಾಯಕವಾಡ್ ಇತರರಿದ್ದರು. ವಿಠಲ ಬಿರಾದಾರ ಸ್ವಾಗತಿಸಿ, ನಿರೂಪಣೆ ಮಾಡಿದರು. ಸ್ವಾಮಿದಾಸ ಮೂಲಗೆ ವಂದಿಸಿದರು.