ಬಾಳೆಹೊನ್ನೂರಿನ ನಿರ್ಮಲಾ ಕಾನ್ವೆಂಟ್‌ನಲ್ಲಿ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ವಿಜಯಮಾತೆ ಚರ್ಚ್ ಧರ್ಮಗುರು ೌಲ್ ಡಿಸೋಜಾ ಉದ್ಘಾಟಿಸಿದರು. ಕೆ.ಆರ್.ಪುಷ್ಪಾ, ಸದಾಶಿವ, ಡಯಾನಾ, ಸರಿತಾ, ಶಿವಪ್ಪ ಇತರರಿದ್ದರು.  
ಜಿಲ್ಲೆ

ಪ್ರತಿಭೆ ಅನಾವರಣಕ್ಕೆ ವೇದಿಕೆ ಬಳಸಿಕೊಳ್ಳಿ

ಬಾಳೆಹೊನ್ನೂರು: ಶಿಕ್ಷಣಕ್ಕೆ ಬೆಲೆ ಕಟ್ಟಲು ಆಗದು. ಎಲ್ಲರೂ ಶಿಕ್ಷಣವಂತರಾದರೆ ಪ್ರಪಂಚವನ್ನು ಪರಿವರ್ತಿಸಲು ಸಾಧ್ಯ ಎಂದು ವಿಜಯಮಾತೆ ಚರ್ಚ್ ಧರ್ಮಗುರು ೌಲ್ ಡಿಸೋಜ ಹೇಳಿದರು.

ಪಟ್ಟಣದ ನಿರ್ಮಲಾ ಕಾನ್ವೆಂಟ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಲಿತಾಂಶದ ಬಗ್ಗೆ ಚಿಂತಿಸುವ ಬದಲು ಪ್ರತಿಭೆ ಅನಾವರಣಗೊಳಿಸಲು ಪ್ರತಿಭಾ ಕಾರಂಜಿಯಂತಹ ಉತ್ತಮ ವೇದಿಕೆಗಳಲ್ಲಿ ಪಾಲ್ಗೊಳ್ಳಬೇಕು. ಪಠ್ಯೇತರ ಚಟುವಟಿಕೆ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುತ್ತದೆ ಎಂದರು.

ಎನ್.ಆರ್.ಪುರ ಬಿಇಒ ಕೆ.ಆರ್.ಪುಷ್ಪಾ ಮಾತನಾಡಿ, ವಿದ್ಯಾರ್ಥಿಗಳಿಗೆ ಅಂಕವೇ ಮಾನದಂಡವಲ್ಲ. ಪಠ್ಯೇತರ ಚಟುವಟಿಕೆ ಹಾಗೂ ದೇಶಾಭಿಮಾನ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದರು.

ಪಾಲಕರು ಹಾಗೂ ಶಿಕ್ಷಕರ ಸಂಘದ ಉಪಾಧ್ಯಕ್ಷ ಗಿರೀಶ್ ಕಾರ್‌ಗದ್ದೆ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ಜಿ.ಗೋವಿಂದೇಗೌಡರ ಆಡಳಿತಾವಧಿಯಲ್ಲಿ ಮಕ್ಕಳ ಮೇಳ ಪ್ರಾರಂಭಿಸಿ ಮಕ್ಕಳಿಗೆ ವೇದಿಕೆ ಮಾಡಿಕೊಟ್ಟಿದ್ದಾರೆ ಎಂದರು.

ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ, ಮಾಗುಂಡಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ರಮೇಶ್ ನಾಯಕ್, ನಿರ್ಮಲಾ ಕಾನ್ವೆಂಟ್ ಮುಖ್ಯಶಿಕ್ಷಕಿ ಡಯಾನಾ, ಅಧ್ಯಕ್ಷ ಸದಾಶಿವ ಆಚಾರ್ಯ, ಸದಸ್ಯರಾದ ಸರಿತಾ, ಶಿವಪ್ಪ, ಶಿಕ್ಷಕ ಕೆ.ಎಂ.ರಾಘವೇಂದ್ರ, ಸಿಆರ್‌ಪಿ ಮಾಲತೇಶ, ಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ಎಲ್ವಿನ್, ಐರಿನ್ ವೇಗಸ್, ಜೆಸಿಂತಾ, ಮಲ್ಲಪ್ಪ, ಅಣ್ಣೇಗೌಡ ಇತರರಿದ್ದರು.