ಜಿಲ್ಲೆ

ಪ್ರತಿಭಾವಂತರಿಗೆ ಪುರಸ್ಕಾರ 13ರಂದು

ಕಲಬುರಗಿ: ಪ್ರದೇಶ ಕುರುಬಗೊಂಡ ಸಂ, ಜಿಲ್ಲಾ ಕುರುಬಗೊಂಡ ನೌಕರರ ಸಂದ ಆಶ್ರಯದಲ್ಲಿ ಕುರುಬ, ಗೊಂಡ, ಕಾಡುಕುರುಬ ಸಮಾಜದ ಸಾಧಕ ವಿದ್ಯರ‍್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಸಮಾರಂಭ ಜು.೧೩ರಂದು ಬೆಳಗ್ಗೆ ೧೧.೩೦ಕ್ಕೆ ನಗರದ ಸಂಗಮೇಶ್ವರ ಸಭಾಗೃಹದಲ್ಲಿ ನಡೆಯಲಿದೆ ಎಂದು ಸಂದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ ತಿಳಿಸಿದರು.

ತಿಂಥಿ ಕನಕಗುರುಪೀಠದ ಶ್ರೀ ಸಿದ್ಧರಮಾನಂದ ಪುರಿ ಸ್ವಾಮೀಜಿ, ಶ್ರೀ ಲಿಂಗಬೀರದೇವರು ಸಾನ್ನಿಧ್ಯದಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕ ಅಲ್ಲಮಪ್ರಭು ಪಾಟೀಲ್​ ಉದ್ಘಾಟಿಸಲಿದ್ದಾರೆ. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಮರತೂರ ನೇತೃತ್ವ ವಹಿಸಲಿದ್ದು, ಗುರುನಾಥ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇನ್​ಸೈಟ್​ ಐಎಎಸ್​ ಅಕಾಡೆಮಿ ಸಂಸ್ಥಾಪಕ ನರ‍್ದೇಶಕ ಜಿ.ಬಿ.ವಿನಯಕುಮಾರ, ಪ್ರಾಥಮಿಕ ಶಾಲೆ ಶಿಕ್ಷಕರ ಸಂದ ರಾಜ್ಯ ಪ್ರಧಾನ ಕರ‍್ಯರ‍್ಶಿ ಚಂದ್ರಶೇಖರ ನೂಗ್ಲಿ ವಿದ್ಯರ‍್ಥಿಗಳಿಗೆ ಮರ‍್ಗರ‍್ಶನ ನೀಡಲಿದ್ದಾರೆ ಎಂದರು.

ಸಮಾಜದ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀೆಯಲ್ಲಿ ಶೇ.೮೦ಕ್ಕಿಂತ ಹೆಚ್ಚು ಅಂಕ ಪಡೆದ ಸುಮಾರು ೧೬೫ ವಿದ್ಯರ‍್ಥಿಗಳು, ಪ್ರಸಕ್ತ ಸಾಲಿನಲ್ಲಿ ಎಂಬಿಬಿಎಸ್​ ಪ್ರವೇಶ ಪಡೆದ ವಿದ್ಯರ‍್ಥಿಗಳು, ಸಮಾಜದ ನಿವೃತ್ತ ನೌಕರರು, ಸಮಾಜದ ಐವರು ಪತ್ರರ‍್ತರನ್ನು ಸಂದಿಂದ ಪುರಸ್ಕರಿಸಲಾಗುವುದು. ಪ್ರತಿಭಾ ಪುರಸ್ಕಾರದ ಜತೆಗೆ ಎಸ್ಸೆಸ್ಸೆಲ್ಸಿ, ಪಿಯುಸಿಲ್ಲಿ ಅತಿ ಹೆಚ್ಚು ಅಂಕ ಪಡೆದ ಜಿಲ್ಲೆಯ ಮೂವರು ವಿದ್ಯರ‍್ಥಿಗಳಿಗೆ ಸರಣಿಯಾಗಿ ಪ್ರಥಮ ೧೦ ಸಾವಿರ ರೂ., ದ್ವೀತಿಯ ೫ ಸಾವಿರ ರೂ., ತೃತೀಯ ಮೂರು ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದರು.

ನಾಗೀಂದ್ರಪ್ಪ ಪೂಜಾರಿ, ರ‍್ಮರಾಜ ಹೇರೂರ, ಲಕ್ಷ$್ಮಣ ಪೂಜಾರಿ, ದಿಲೀಪ ಪಾಟೀಲ್​, ಲಿಂಗರಾಜ ಬಿರಾದಾರ, ನರ‍್ಮಲಾ ಬರಗಾಲಿ ಇತರರಿದ್ದರು.