ಜಿಲ್ಲೆ

ಪ್ರತಿಭಾವಂತ ಶಿಕ್ಷಕರಿದ್ದರೂ ಕೊನೇ ಸ್ಥಾನ ಏಕೆ ?

ಶಹಾಪುರ: ಸರ್ಕಾರಿ ಶಾಲೆಗಳಿಗೆ ಶಿಕ್ಷಕರಾಗಿ ನೇಮಕಗೊಳ್ಳುವವರು ಪ್ರತಿಭಾವಂತರು ಮತ್ತು ವಿವಿಧ ಸ್ವರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಬಂದರೂ ಜಿಲ್ಲೆಯ ಫಲಿತಾಂಶದಲ್ಲಿ ಕೊನೇ ಸ್ಥಾನದಲ್ಲಿ ಉಳಿಯುತ್ತಿದೆ ಇದಕ್ಕೆ ಏನು ಕಾರಣ ಎಂಬ ಪ್ರಶ್ನೆ ನನಗೆ ಸದಾ ಕಾಡುತ್ತಿದೆ ಎಂದು ತಮ್ಮ ಮನದಾಳದ ಮಾತನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಹಮ್ಮಿಕೊಂಡ ತಾಲೂಕು ಮಟ್ಟದ ಶಿP್ಷÀಕರ ದಿನ ಮತ್ತು ಜಿ¯್ಲÁ ಹಾಗೂ ತಾಲೂಕು ಮಟ್ಟದ ಶಿP್ಷÀಕ ಪ್ರಶಸ್ತಿ ಪ್ರದಾನ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಫಲಿತಾಂಶ ಕೊನೇ ಸ್ಥಾನಕ್ಕೆ ಬರಲು ಕೇವಲ ಶಿಕ್ಷಕರೇ ಕಾರಣ ಅಂತ ಅಲ್ಲ. ಪಾಲಕರೂ ಕೂಡ. ಹೀಗಾಗಿ ಸರ್ಕಾರ ಈ ವಿಷಯ ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದರು.

ಶಿಕ್ಷಕರು ದೇಶದ ಶಿಲ್ಪಿಗಳು, ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಸಹ ಉತ್ತಮ ನಾಗರಿಕ ಮತ್ತು ಉನ್ನತ ವ್ಯಕ್ತಿಯಾಗಲಿ ಎಂಬ ಆಶೆಯಿಂದ ವಿದ್ಯೆ ಕಲಿಸುತ್ತಾರೆ. ಆದರೆ ಅವರ ಋಣ ತೀರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕೆಕೆಆರ್‌ಡಿಬಿಯಿಂದ ಅಕ್ಷರ ಅವಿಸ್ಕಾರ ಯೋಜನೆಯಡಿ ೧೨೫೦ ಕೋಟಿ ರೂ. ಖರ್ಚು ಮಾಡಿ ಉತ್ತಮ ಶಿಕ್ಷಣ ನೀಡಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು. ಕೆಂಭಾವಿ ಹಿರಿಯ ಸಾಹಿತಿ ನಿಂಗಣಗೌಡ ದೇಸಾಯಿ ಉಪನ್ಯಾಸ ನೀಡಿದರು.

ಡಿಡಿಪಿಐ ಮಂಜುನಾಥ, ವೃಷಭೇಂದ್ರಯ್ಯ, ಸೋಮಶೇಖರ ಬಿರಾದಾರ, ಜಾಹೇದಾಬೇಗಂ, ರೇಣುಕಾ ಪಾಟೀಲ್, ಸೂರ್ಯವಂಶಿ, ಶರಣಪ್ಪ ಪಾಟೀಲ್, ರಾಯಪ್ಪಗೌಡ ಹುಡೇದ, ಮ¯್ಲೆÃಶಪ್ಪ ಹೊಸಮನಿ, ಆರ್.ಚೆನ್ನಬಸ್ಸು, ಶಿವಲಿಂಗಪ್ಪ, ಮಂಜುನಾಥ ರಾಠೋಡ್, ಚಂದ್ರಶೇಖರ, ಭೀಮಣಗೌಡ ತಳವಾಡ, ಅಯ್ಯಪ್ಪ ಬಡಿಗೇರ, ಚಂದಪ್ಪ, ಶಂಕ್ರಪ್ಪ ಗೊಂದನೂರ, ಸಿದ್ದಣ್ಣ ಗೂಗಲï, ಖಾಜಾ ಮೋಹಿನೊದ್ದೀನ್, ಲಕ್ಕಪ್ಪ ಉಕ್ಕಿನಾಳ ಸೇರಿ ಇತರರಿದ್ದರು. ಆದರ್ಶ ಮಹಾ ವಿದ್ಯಾಲಯ ವಿಧ್ಯಾರ್ಥಿಗಳು ಪ್ರಾರ್ಥಿಸಿದರು. ಶಿP್ಷÀಕ ವೀರಣ್ಣ ಸ್ವಾಗತಿಸಿದರು. ಶಿP್ಷÀಕ ಲಕ್ಷö್ಮಣ ಲಾಳಸಗೇರಿ ಕಾರ್ಯಕ್ರಮ ನಿರೂಪಿಸಿದರು.

ಈ ವೇಳೆ ಜಿ¯್ಲÁ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮಿನಾಕ್ಷಿ ಹೊಸಮನಿ, ಸಂಗೀತಾ ದೇಸಾಯಿ, ಪರಸಪ್ಪ ಹೊಸೂರ ಮತ್ತು ತಾಲೂಕು ಮಟ್ಟದ ಪ್ರಶಸ್ತಿ ಪಡೆದ ಅನಿತಾ, ಗುತ್ತಪ್ಪ ಬಸವನಗುಡಿ, ದರ್ಶನಾಪುರ ಸರ್ಕಾರಿ ಶಾಲೆಯ ಮಾಲನಬಿ ಅವರನ್ನು ಸಚಿವರು ಸನ್ಮಾನಿಸಿದರು.