ಸೋಮವಾರಪೇಟೆ ಅಪ್ಪು ಅಭಿಮಾನಿಗಳ ಸಂಘದಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರವಿ, ಪುಷ್ಪಾ, ಪ್ರವೀಣ್, ಡಿಸಿಲ್ವಾ, ಸಂಭ್ರಮ್ ಇದ್ದರು.  
ಜಿಲ್ಲೆ

ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಸನ್ಮಾನ

ಸೋಮವಾರಪೇಟೆ: ಅಬ್ಬೂರುಕಟ್ಟೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಪ್ಪು ಅಭಿಮಾನಿಗಳ ಸಂಘದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಗಿತ್ತು.


ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600/600 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮೂಡಬಿದರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಹಾಗೂ ತಾಲೂಕಿನ ತಲ್ತಾರೆಶೆಟ್ಟಳ್ಳಿ ಗ್ರಾಮದ ನಿವಾಸಿ ಕೆ.ಎ.ಅನನ್ಯಾ, 10ನೇ ತರಗತಿಯಲ್ಲಿ 625/590 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಸೋಮವಾರಪೇಟೆ ಒಎಲ್‌ವಿ ಶಾಲೆ ವಿದ್ಯಾರ್ಥಿನಿ ಅನಿಷಾ ಅವರನ್ನು ಸನ್ಮಾನಿಸಲಾಯಿತು.


ಬ್ಯಾಂಕ್ ಆಫ್ ಬರೋಡ ಅಬ್ಬೂರುಕಟ್ಟೆ ಶಾಖಾ ವ್ಯವಸ್ಥಾಪಕ ನಾಗರಾಜು ಅವರನ್ನು ಸನ್ಮಾನಿಸಲಾಯಿತು. ಅಪ್ಪು ಅಭಿಮಾನಿ ಸಂಘದ ಅಧ್ಯಕ್ಷ ರವಿ, ಗ್ರಾಪಂ ಅಧ್ಯಕ್ಷೆ ಪುಷ್ಪಾ, ಉಪಾಧ್ಯಕ್ಷ ಪ್ರವೀಣ್, ತಾಪಂ ಮಾಜಿ ಸದಸ್ಯ ಎಸ್.ಎಂ.ಡಿಸಿಲ್ವಾ ಮತ್ತಿತರರು ಹಾಜರಿದ್ದರು.