ಜಿಲ್ಲೆ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೇಕಿದೆ ಪ್ರೋತ್ಸಾಹ

ಚಿತ್ರದುರ್ಗ: ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕಿದೆ ಎಂದು ರಾಜ್ಯ ನದಾಫ್/ ಪಿಂಜಾರ ಸಂಘದ ಮಹಿಳಾ ಘಟಕದ ಅಧಕ್ಷೆ ಪಿ. ಸಲೀಮಾ ಹೇಳಿದರು.

ಸಂಘದ ಜಿಲ್ಲಾ ಮಹಿಳಾ ಘಟಕ ಹಾಗೂ ಏಜೆ ಫೌಂಡೇಶನ್‌ನಿಂದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಗಳಲ್ಲಿ ಅತಿಹೆಚ್ಚು ಅಂಕಗ ಳೊಂದಿಗೆ ಉತ್ತೀರ್ಣರಾದ ಜಿಲ್ಲೆಯ ಸರ್ಕಾರಿ, ಅನುದಾನಿತ ಶಾಲಾ, ಕಾಲೇಜುಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೀಬಾರ-ಗುತ್ತಿನಾ ಡು ವಿಶ್ವಮಾನವ ವಸತಿಶಾಲೆ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಮಕ್ಕಳ ಪ್ರತಿಭೆಗೆ ತಕ್ಕ ಪ್ರೋತ್ಸಾಹ ದೊರೆತರೆ, ಓದು, ಆಟೋಟಗಳೆಡೆ ಅವರು ಹೆಚ್ಚಿನ ಆಸಕ್ತಿ ವಹಿಸುತ್ತಾರೆ ಹಾಗೂ ಭವಿಷ್ಯದ ಗುರಿಯೆಡೆಗೆ ಸಾಗು ತ್ತಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಾ ಪುರಸ್ಕಾರದಂಥ ಕಾರ‌್ಯಕ್ರಮಗಳನ್ನು ಸಂಘ ಆಯೋಜಿಸಿಕೊಂಡು ಬರುತ್ತಿದೆ ಎಂದರು.

ಚಿಕ್ಕಜಾಜೂರು ಎಸ್‌ಜೆಎಂ ಕಾಲೇಜು ಉಪನ್ಯಾಸಕ ನಿಸಾರ್‌ಅಹಮದ್ ಮಾತನಾಡಿ, ವಿಜ್ಞಾನಕ್ಕೆ ಪೂರಕ ಪಠ್ಯವನ್ನು ವ್ಯವಸ್ಥಿತವಾಗಿ ಬೋಧಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಏಜೆ ಫೌಂಡೇಷನ್ ಅಧ್ಯಕ್ಷೆ ಜೆ.ಬಿ. ನೂರ್‌ಜಾನ್, ಸದಸ್ಯ ಹುಸೇನ್‌ಮಿಯಾ, ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ ಕಾರ‌್ಯದರ್ಶಿ ಎಂ. ನೀಲಕಂಠದೇವರು, ಕೆಆರ್‌ಎನ್‌ಪಿಎಸ್ ಜಿಲ್ಲಾ ಉಪಾಧ್ಯಕ್ಷ ಪಿ. ಇಮಾಂಸಾಬ್, ವಿಶ್ವ ಮಾನವ ಪದವಿ ಪೂರ್ವ ಕಾಲೇಜು ಪ್ರಾಚಾರ್ಯೆ ಎಚ್.ಆರ್. ಸುಧಾ ಇತರರು ಇದ್ದರು.