ಕೊಡೇಕಲ್: ಗ್ರಾಮೀಣ ಪ್ರತಿಭೆಯೊಂದು ನೀಟ್ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆಯುವ ಮೂಲಕ ವೈದ್ಯಕೀಯ ಸಿಟ್ ಪಡೆದು ಇತರೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾನೆ.
ಇಲ್ಲಿನ ರಾಯನಗೋಳ ಗ್ರಾಮದ ಬಡ ಪ್ರತಿಭೆ ಶರೀಪ್‌ಸಾಬ್ ಕಸೂತಿ ವೈದ್ಯಕೀಯ ಸಿಟ್ ಪಡೆದ ವಿದ್ಯಾರ್ಥಿ. ಗ್ರಾಮದ ಬಡ ಕೂಲಿಕಾರ್ಮಿಕರಾದ ನಬೀಸಾಬ್ ಕಸೂತಿ ಮತ್ತು ಜುಲೇಕಾ ದಂಪತಿಗಳ ಮಗ ಶರೀಫ್ ಮಂಡ್ಯ ಜಿಲ್ಲೆಯ ಆದಿ ಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಕ ಸಿಟ್ ಪಡೆದುಕೊಂಡಿದ್ದಾನೆ.
ಶರೀಫ್‌ಸಾಬ್ ಮೊದಲಿನಿಂದಲೂ ಓದಿನಲ್ಲಿ ಚುರುಕು. ಪ್ರಾಥಮಿಕ ಶಿಕ್ಷಣ ಗ್ರಾಮದಲ್ಲಿ ಪೂರೈಸಿ ನಂತರ ನಾರಾಯಣಪುರ ಸರ್ಕಾರಿ ಪ್ರೌಢಶಾಲೆಗೆ ಸೇರ್ಪಡೆಯಾದ ೧೦ನೇ ತರಗತಿಯಲ್ಲಿ ಶೇ ೯೮.೪೬ ಅಂಕ ಪಡೆದು, ರಾಯಚೂರು ಜಿಲ್ಲೆಯ ಲಿಂಗಸೂರಿನ ಸರ್.ಎಂ.ವಿಶ್ವೇಶ್ವರಯ್ಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುನಲ್ಲಿ ಶೇ. ೯೪.೦೬ ಅಂಕ ಪಡೆದುಕೊಂಡಿದ್ದಾರೆ. ವೈದ್ಯನಾಗಬೇಕು ಎಂಬ ಕನಸು ಹೊತ್ತ ಶರೀಫ್‌ಗೆ ನೀಟ್ ನೀಟ್ ಪರೀಕ್ಷೆ ಮೂಲಕ ವೈದ್ಯಕೀಯ ಸೀಟ್ ಲಭಿಸಿದೆ. ಆದರೆ ಆರ್ಥಿಕ ಪರಿಸ್ಥಿತಿ ವೈದ್ಯಕೀಯ ಕೋರ್ಸ್ ಕಲಿಕೆಗೆ ಅಡ್ಡಿಯಾಗಿದ್ದು, ಇದಕ್ಕೆ ತಗಲುವ ಖರ್ಚು ಭರಿಸಲು ಕುಟುಂಬ ಇದೀಹ ಹರ ಸಾಹಸವನ್ನು ಪಡುತ್ತಿದೆ. ಖಾಸಗಿ ಕಾಲೇಜಿನಲ್ಲಿ ವೈದ್ಯಕೀಯ ಸಿಟ್ ದೊರೆತಿರುವ ಕಾರಣ ಶರೀಪ್‌ಸಾಬ್‌ಗೆ ವೈದ್ಯಕೀಯ ಕೊರ್ಸ್ ಪೂರ್ಣಗೊಳಿಸಲು ಆರ್ಥಿಕ ಸಮಸ್ಯೆಯ ಕಾರಣ ಶಿಕ್ಷಣ ಪ್ರೇಮಿಗಳು, ಸಂಘ-ಸAಸ್ಥೆಗಳು ಮುಂದೆ ಬಂದು ಸಹಾಯಹಸ್ತ ನೀಡಿದೆ ಗ್ರಾಮೀಣ ಬಡ ಪ್ರತಿಭೆಯೊಂದು ವೈದ್ಯನಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ.
ಸಹಾಯ ಹಸ್ತ ನೀಡುವವರು ಶರೀಫ್‌ಸಾಬ್ ಕಸೂತಿ ಖಾತೆ ಸಂಖ್ಯೆ ೬೨೩೩೭೯೪೭೫೭೨ ಭಾರತೀಯ ಸ್ಟೇಟ್ ಬ್ಯಾಂಕ್ ನಾರಾಯಣಪುರ. ಐಎಫ್‌ಎಸ್‌ಸಿ ಕೋಡ್: ಎಸ್‌ಬಿಐಎನ್‌೦೦೨೦೩೬೫ಗೆ ನೆರವು ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ.೮೧೨೩೨೦೫೮೪೬.