ದಾವಣಗೆರೆ:ಎಲೆಮರೆಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ, ಅವರ ಪ್ರತಿಭಾವಂತಿಕೆ ಅನಾವರಣಗೊಳಿಸುವುದು ಸಂಘಟನೆಗಳ ಕೆಲಸವಾಗಿದೆ ಎಂದು ಡಿ.ಸಿ.ಎಂ.ಟೌನ್‌ಶಿಪ್ ನಾಗರಿಕರ ಸಂಘದ ಅಧ್ಯಕ್ಷ ಕೆ.ಹಾಲಪ್ಪ ಹೇಳಿದರು.
ದಾವಣಗೆರೆಯ ಕಲಾಕುಂಚ ಸಂಸ್ಥೆಯಿಂದ ಡಿ.ಸಿ.ಎಂ.ಟೌನ್‌ಶಿಪ್‌ನ ಚೌಡೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ಇತ್ತೀಚೆಗೆ ಶ್ರಾವಣ ಸಂಗೀತ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಾಣಿಜ್ಯ ನಗರವಾಗಿರುವ ದಾವಣಗೆರೆ ಸಾಂಸ್ಕೃತಿಕ ನಗರಿಯಾಗಿ ಗುರುತಿಸಿಕೊಂಡಿದೆ. ಇದರಲ್ಲಿ ನಗರದ ವಿವಿಧ ಸಂಘಟನೆಗಳ ಜತೆಗೆ ಕಲಾಕುಂಚ ಸಂಸ್ಥೆಯ ಪಾತ್ರವಿದೆ ಎಂದು ಹೇಳಿದರು.
ಡಿ.ಸಿ.ಎಂ. ಶಾಖೆಯ ಅಧ್ಯಕ್ಷೆ ಶಾರದಮ್ಮ ಶಿವನಪ್ಪ ಮಾತನಾಡಿ, ಸಂಘ-ಸಂಸ್ಥೆ ಕಟ್ಟುವುದು ಸುಲಭದ ಮಾತಲ್ಲ. ಎಲ್ಲರೂ ಸಂಕುಚಿತತೆ ಕೈಬಿಟ್ಟು ವಿಶಾಲ ಮನೋಭಾವದೊಂದಿಗೆ ಸಹಕಾರ, ಸಹಯೋಗ ನೀಡಿದರೆ ಸಂಸ್ಥೆಗಳ ಕಾರ್ಯಕ್ರಮಗಳು ಯಶಸ್ಸು ಕಾಣಲಿವೆ ಎಂದು ಹೇಳಿದರು.
ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಮಾತನಾಡಿ, ನಿರಂತರವಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಿ, ಅವಕಾಶ ಸದ್ಭಳಕೆ ಮಾಡಿಕೊಂಡಾಗ ಎಲ್ಲರ ಸಾಮರ್ಥ್ಯ ತಿಳಿದುಬರಲಿದೆ ಎಂದರು.
ಕಲಾಕುಂಚ ಅಧ್ಯಕ್ಷ ಕೆ.ಎಚ್.ಮಂಜುನಾಥ್, ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ ಇದ್ದರು.
ಪಿ.ವಿಶ್ವನಾಥ್, ನಿರ್ಮಲಾ ವಿಶ್ವನಾಥ್, ಟಿ.ಆರ್.ಹೇಮಂತ್‌ಕುಮಾರ್, ಅನಿತಾ ಕಲ್ಯಾಣರಾವ್ ಶ್ರಾವಣ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಡಿ.ಎಚ್.ಚನ್ನಬಸಪ್ಪ ಸ್ವಾಗತಿಸಿದರು. ಡಾ.ಶೋಭಾ ಚಪ್ಪರದಹಳ್ಳಿಮಠ ಕಾರ್ಯಕ್ರಮ ನಿರೂಪಿಸಿದರು. ಎಸ್.ಶಿವನಪ್ಪ ವಂದಿಸಿದರು