ಜಿಲ್ಲೆ

ಪ್ರತಿಭಾ ಪುರಸ್ಕಾರ, ಸನ್ಮಾನ 12ರಂದು

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಗೋಮಾಂತಕ ಸಮಾಜ ಸೇವಾ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ, ಪ್ರತಿಭಾ ಪುರಸ್ಕಾರ ಮತ್ತು ಸಮಾಜದ ಗಣ್ಯರಿಗೆ ಸನ್ಮಾನ ಸಮಾರಂಭ ಜ. 12ರಂದು ಬೆಳಗ್ಗೆ 10.30ಕ್ಕೆ ನಗರದ ಹೊಸೂರಿನ ಉತ್ತರ ಕನ್ನಡ ವೈಶ್ಯ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಗೋಮಾಂತಕ ಮರಾಠ ಸಮಾಜ (ಗೋವಾ) ಅಧ್ಯಕ್ಷ ಕಾಳಿದಾಸ ಖಂಡೆಪಾರ್ಕರ ಉದ್ಘಾಟಿಸುವರು. ಗೋಮಾಂತಕ ಸಮಾಜ ಸೇವಾ ಸಂಘ (ಹುಬ್ಬಳ್ಳಿ -ಧಾರವಾಡ) ಅಧ್ಯಕ್ಷ ಕೃಷ್ಣಕಾಂತ ಅಂಕೋಲೆಕರ ಅಧ್ಯಕ್ಷತೆ ವಹಿಸುವರು. ಉತ್ಕರ್ಷ ಬಾನಸ್ಥರಕರ, ಗಜಾನನ ಹೊನ್ನಾವರ ಪಾಲ್ಗೊಳ್ಳುವರು.

ಸಮಾಜದ ಹಿರಿಯರು, ವಿಶೇಷ ಸಾಧನೆ ಮಾಡಿದ ಸಮಾಜದ ಸದಸ್ಯರನ್ನು ಸನ್ಮಾನಿಸಲಾಗುವುದು. ಎಸ್​ಎಸ್​ಎಲ್​ಸಿ ಮತ್ತು ಪಿಯು ಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪಾರಿತೋಷಕ, ಪ್ರಮಾಣ ಪತ್ರ ಮತ್ತು ನಗದು ಬಹುಮಾನ ನೀಡಲಾಗುವದು ಎಂದು ಅಧ್ಯಕ್ಷ ಕೃಷ್ಣಕಾಂತ ಅಂಕೋಲೆಕರ ತಿಳಿಸಿದ್ದಾರೆ.