ಜಿಲ್ಲೆ

ಪ್ರತಿಭಾ ಕಾರಂಜಿಯಲ್ಲಿ ರಾಜನಾಳ ಶಾಲೆ ಮಕ್ಕಳ ಸಾಧನೆ

ಕಲಬುರಗಿ: ಕಮಲಾಪುರ ತಾಲೂಕಿನ ಓಕಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ರಾಜನಾಳದ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಸಾಧನೆ ಮೆರೆದಿದ್ದಾರೆ.

ಪ್ರಥಮ ಸ್ಥಾನ: ನೌಸಿನ್ ತೋಫಿಕ್ (ಧಾರ್ಮಿಕ ಪಠಣ), ವಿಶಾಲ ವಿಜಯಕುಮಾರ, ವೀರೇಶ ಅರುಣಕುಮಾರ (ಛದ್ಮವೇಷ), ಕನಕಶ್ರೀ ಬಸವರಾಜ (ಲಘು ಸಂಗೀತ), ಸುನೀತಾ ಅಪ್ಪಾರಾವ್ (ಭಾವಗೀತೆ), ಮಲ್ಲಿಕಾರ್ಜುನ ವಿದ್ಯಾಧರ (ಕವನ ಪದ್ಯವಾಚನ), ಆದಿತ್ಯ ವಿಜಯಕುಮಾರ (ಆಶು ಭಾಷಣ), ಸನ್ನಿಧಿ ಮಲ್ಲಿಕಾರ್ಜುನ (ಧಾರ್ಮಿಕ ಪಠಣ, ಇಂಗ್ಲಿಷ್ ಕಂಠಪಾಠ), ಆಕಾಶ ಉಮೇಶ (ಧಾರ್ಮಿಕ ಪಠಣ).

ದ್ವಿತೀಯ ಸ್ಥಾನ: ಆಯಿಲ್ ಮುನೀರ್ ಪಾಶಾ (ಧಾರ್ಮಿಕ ಪಠಣ), ಆದರ್ಶ ರಾಜಕುಮಾರ (ಕಥೆ), ವೈಷ್ಣವಿ ಸೂರ್ಯಕಾಂತ (ಭಕ್ತಿಗೀತೆ, ಲಘು ಸಂಗೀತ), ಅಶ್ವಿನಿ ಸತೀಶ (ಕ್ಲೆ ಮಾಡ್ಲಿಂಗ್), ದೀಪಿಕ್ ಉಮೇಶ (ಮಿಮಿಕ್ರಿ), ಹುತ್ತೆಪ್ಪ ಗುರುಸಿದ್ದಪ್ಪ (ಕಥೆ ಹೇಳುವುದು), ಆದಿತ್ಯ ಅಂಕುಶ (ಕನ್ನಡ ಕಂಠಪಾಠ), ಸ್ನೇಹಾ ಅನೀಲ್ (ರಂಗೋಲಿ), ಆದಿತ್ಯ ವಿಜಯಕುಮಾರ (ಇಂಗ್ಲಿಷ್ ಕಂಠಪಾಠ, ಚಿತ್ರಕಲೆ), ಆದಿತ್ಯ ರಮೇಶ (ಕವನ ಪದ್ಯ ವಾಚನ), ಅದ್ವೀಕಾ ರಮೇಶ (ಅಭಿನಯ ಗೀತೆ).

ತೃತೀಯ ಸ್ಥಾನ: ಬಸವ ಗುಂಡಪ್ಪ (ಕನ್ನಡ ಕಂಠಪಾಠ), ದೀಪಿಕಾ ದಯಾನಂದ (ಮಿಮಿಕ್ರಿ), ಪ್ರಜ್ವಲ್ ಬಬ್ರುವಾಹನ (ಚಿತ್ರಕಲೆ), ಶ್ರೀನಿಧಿ ಮಲ್ಲಿಕಾರ್ಜುನ (ಛದ್ಮವೇಷ), ರಮೇಶ (ಹಿಂದಿ ಕಂಠಪಾಠ), ಕನಕಶ್ರೀ ಬಸವರಾಜ (ಭಕ್ತಿ ಗೀತೆ).

ವಿದ್ಯಾರ್ಥಿಗಳ ಸಾಧನೆಗೆ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವಂತಕುಮಾರ ಪಾಟೀಲ್, ಕಾರ್ಯದರ್ಶಿ ಜಗದೀಶ ಬಿ.ಪಾಟೀಲ್, ಮುಖ್ಯಗುರು ಚಂದ್ರಕಾAತ ಶೇರಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.