oppo_2 
ಜಿಲ್ಲೆ

ಪ್ರತಿ ಸಾಲಿನಲ್ಲೂ ವಿಭಿನ್ನಾರ್ಥ ನೀಡುವ ಗಜಲ್

ಕಲಬುರಗಿ: ಗಜಲ್‌ನ ವಿಶಿಷ್ಟ, ಶಿಸ್ತುಬದ್ಧ, ಪ್ರೀತಿ, ವಿರಹ, ಭಾವನೆ ಸೇರಿ ಎಲ್ಲ ಅಂಶಗಳನ್ನು ಹೊಂದಿದ ಸಾಹಿತ್ಯವಾಗಿದ್ದು, ಪ್ರತಿ ಸಾಲಿನಲ್ಲೂ ಭಿನ್ನ, ವಿಭಿನ್ನ ಅರ್ಥ ನೀಡುತ್ತದೆ. ಐದು ದ್ವಿಪದಿಯ ಗಜಲ್‌ನ ಐವತ್ತು ಪುಟಕ್ಕೆ ಹಿಗ್ಗಿಸಿಕೊಳ್ಳಬಹುದು ಎಂದು ಪ್ರಥಮ ಗಜಲ್ ಸಮ್ಮೇಳನ ಸರ್ವಾಧ್ಯಕ್ಷೆ ಪ್ರಭಾವತಿ ದೇಸಾಯಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಗಜಲ್ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದದಲ್ಲಿ ಮಾತನಾಡಿ, ಭಾವ ಗೀತೆಗಳಿಗೂ ಗಜಲ್‌ಗಳಿಗೂ ವ್ಯತ್ಯಾಸವಿದೆ. ಗಜಲ್‌ಗಳಲ್ಲಿ ಭಾವತೀವ್ರತೆ ಇದ್ದು, ಪ್ರೀತಿ, ವಿರಹ, ಭಾವನೆ ಮಹತ್ವದ್ದಾಗಿದೆ. ಅದನ್ನು ಅನುಭವಿಸಲು ಆಳವಾದ, ಆಸಕ್ತಿದಾಯಕ ಅಧ್ಯಯನ ಅಗತ್ಯ ಎಂದರು.
ಗಜಲ್ ಸಾಹಿತ್ಯ ಹೃದಯದಿಂದ ಬಂದು, ಹೃದಯ ತಟ್ಟುತ್ತದೆ. ಕಲಬುರಗಿಯಲ್ಲಿ ಅಧ್ಯಯನ ಮಾಡಿದ್ದು, ತಂದೆ, ಅಕ್ಕನ ಒಡನಾಟದಿಂದ ಸಾಹಿತ್ಯಸಾಕ್ತಿ ಬೆಳೆಯಿತು. ವಿಜಯಪುರದಲ್ಲಿ ೧೫ ಜನರ ಸಾಹಿತ್ಯ ಬಳಗ ಸೃಷ್ಟಿಸಿ, ವಿವಿಧ ಸಾಹಿತ್ಯ ರಚನೆ ಚರ್ಚೆ ನಡೆಸಿz್ದÉÃವು. ಕವನದಿಂದ ಆರಂಭವಾದ ಸಾಹಿತ್ಯ ರಚನೆಗೆ, ಗಜಲ್‌ನೊಂದಿಗೆ ಸಾಗಿದೆ ಎಂದು ತಮ್ಮ ಪಯಣ ಮೆಲುಕು ಹಾಕಿದರು.
ಮೊದಲು ಹೈಕ ಭಾಗದವರೆ ಗಜಲ್ ಬರೆಯುತ್ತಿದ್ದರು ಎಂಬ ಭಾವವಿತ್ತು. ಪ್ರಚಲಿತದಲ್ಲಿ ಇರಲಿಲ್ಲ. ೭೦ರ ದಶಕದಲ್ಲಿ ಆರಂಭವಾದ ಗಜಲ್ ಆಸಕ್ತಿ ಇದೀಗ ಪ್ರವರ್ದಮಾನಕ್ಕೆ ಬಂದಿದ್ದು, ಇನ್ನಷ್ಟು ಬೆಳೆಯಬೇಕಿದೆ. ಆದ್ದರಿಂದ ಗಜಲ್‌ಗೆ ರಾಣಿಯ ಸ್ಥಾನ ನೀಡಿ, ಮೆರೆಸಬೇಕು, ಬೆಳೆಸಬೇಕು ಎಂದರು.
ಉರ್ದು ಸಾಹಿತ್ಯದ ಜ್ಞಾನ ಇದ್ದರೆ ಚೆನ್ನ, ಕಡ್ಡಾಯವಲ್ಲ. ಗಜಲ್ ಮೂಲ ಪರ್ಶಿಯನ್, ಉರ್ದು ಆಗಿದ್ದು, ಅದರ ಅಧ್ಯಯನ ಇದ್ದರೆ ಗಜಲ್ ರಚನೆ, ಆಸ್ವಾದನೆಗೆ ಅನುಕೂಲವಿದೆ. ಪ್ರಸ್ತುತ ಕನ್ನಡದಲ್ಲಿನ ಗಜಲ್ ಸಾಹಿತ್ಯವಿದ್ದು, ಅದರ ನಿಯಮ, ಅರ್ಥೆÊಸುವಿಕೆಯೊಂದಿಗೆ ಯುವ ಪೀಳಿಗೆ ರಚನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಶೇ.೮೦ ಸಾಹಿತ್ಯದಲ್ಲಿ ಪ್ರೀತಿ, ವೇದನೆ ಇದೆ. ಗಜಲ್‌ಗಳಿಗೆ ನಿಯಮಗಳು ತುಂಬ ಇವೆ. ವ್ಯಾಕರಣ ಬದ್ಧ, ಜೀವಮಯ ಇರಬೇಕು. ಹಾಡಲು ಬರಬೇಕು. ಕನ್ನಡದ ಸಾಂಗತ್ಯದ ಪ್ರಕಾರವೇ ಗಜಲ್ ಎಂದು ಶ್ರೀಶೈಲ ಮಾದನ್ನವರ್ ಹೇಳಿದರು.
ಗಜಲ್ ಅಕಾಡೆಮಿಯ ಮಹಿಪಾಲರಡ್ಡಿ ಮಾತನಾಡಿ, ಗಜಲ್‌ಗಳ ವಾತಾವರಣ ಸೃಷ್ಟಿಸಿ, ಭಾವನೆಗಳನ್ನು ವ್ಯಕ್ತಪಡಿಸಲಾಗುತ್ತಿದೆ. ಗಜಲ್ ನಾದ ಎಲ್ಲೆಡೆ ಹರಿದಾಡಲಿ ಎಂದರು.
ಅಕಾಡೆಮಿ ಅಧ್ಯಕ್ಷ ರಂಗಸ್ವಾಮಿ ಸಿದ್ದಯ್ಯ, ಸಂಚಾಲಕ ಅಬ್ದುಲ್ ಹೈ ತೋರಣಗಲ್ಲು, ಡಾ.ಕಪೀಲದೇವ ಚಕ್ರವರ್ತಿ, ಡಾ.ಸುರೇಶ, ಹಾಮಾ ಸತೀಶ, ಶ್ರೀಶೈಲ ಮಾದಣ್ಣನವರ, ನೂರ್ ಅಹ್ಮದ್ ಇತರರಿದ್ದರು.