ಉಗಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಶಿಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ರಾಜು ಕಾಗೆ ಉದ್ಘಾಟಿಸಿದರು. ಬಸವಲಿಂಗ ಸ್ವಾಮೀಜಿ, ರಾಜೇಶ ಬುರ್ಲಿ, ಎಂ.ಆರ್​.ಮುಂಜೆ, ಜಿ.ಕೆ.ಹರೀಶ ಇತರರಿದ್ದರು. 
ಜಿಲ್ಲೆ

ಪ್ರತಿ ಸಾಧಕನ ಬೆನ್ನೆಲುಬು ಗುರು

ಕಾಗವಾಡ: ಶಿಕ್ಷಕ ವೃತ್ತಿಗಿರುವ ನತೆ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಶಿಕರ ಮೇಲಿದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ತಾಲೂಕಿನ ಉಗಾರ ಗ್ರಾಮದ ಜೈನ ಕಾರ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ, ಪ್ರಧಾನಮಂತ್ರಿ, ರಾಷ್ಟ್ರಪತಿಗಳು ವಿದ್ಯೆ ಕಲಿಸಿದ ಗುರುವಿಗೆ ಶಿರಬಾಗಿ ನಮಸ್ಕರಿಸುತ್ತಾರೆ. ಅದಕ್ಕೆ ಕಾರಣ ಪ್ರತಿ ಸಾಧಕನ ಹಿಂದಿರುವ ಬೆನ್ನೆಲುಬೇ ಶಿಕ್ಷಕ ಎಂದರು.

ತಹಸೀಲ್ದಾರ್​ ರಾಜೇಶ ಬುರ್ಲಿ ಮಾತನಾಡಿ, ಡಾ. ಎಸ್​. ರಾಧಾಕೃಷ್ಣನ್​ ಬದುಕು ನಮಗೆ ಆದರ್ಶವಾಗಬೇಕು ಎಂದರು.
ಉಗಾರ ಗುರುದೇವಾಶ್ರಮದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಶಿಕ್ಷಕರು ಕೇವಲ ಶಿಣ ನೀಡುವ ನೌಕರರಲ್ಲ. ಭವ್ಯ ಭಾರತ ನಿರ್ಮಾತೃಗಳು ಎಂದರು.
ನಿವೃತ್ತ ಶಿಕರನ್ನು ಸನ್ಮಾನಿಸಲಾಯಿತು. ಬಿಇಒ ಎಂ.ಆರ್​.ಮುಂಜೆ, ವಿಶೇಷ ಭೂ ಸ್ವಾಧಿನಾಧಿಕಾರಿ ಜಿ.ಕೆ.ಹರೀಶ, ಸಿಡಿಪಿಒ ಸಂಜೀವಕುಮಾರ ಸದಲಗಿ, ಎಸ್​.ಬಿ.ಪಾಟೀಲ, ಗೌಡಪ್ಪ ಸಡ್ಡಿ, ಎಂ.ಜಿ.ಸಂಕಪಾಳ, ಎಂ.ವೈ.ಪೂಜಾರಿ, ಮಲ್ಲಿಕಾರ್ಜುನ ಪಾಟೀಲ ಇತರರಿದ್ದರು.