ಬಾಗಲಕೋಟೆ ನಗರದ ಬಿವಿವಿ ಸಂಘದ ಮಿನಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬ್ಯಾಂಕಿನ ವಾರ್ಷಿಕ ಸರ್ವಸಾಧಾರಣ ಸಭೆ ಅಧ್ಯಕ್ಷತೆ ವಹಿಸಿ ಬ್ಯಾಂಕ್ ಅಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಾತನಾಡಿದರು.  
ಜಿಲ್ಲೆ

ಪ್ರತಿ ವರ್ಷವು ಲಾಭದತ್ತ ಹೆಜ್ಜೆ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಬೀಳೂರು ಗುರುಬಸವ ಪತ್ತಿನ ಸಹಕಾರ ಸಂಘವೂ ೨೦೨೩-೨೪ ನೇ ಸಾಲಿನಲ್ಲಿ ೧.೮೫ ಕೋಟಿ ರೂ,ಗಳ ನಿವ್ವಳ ಲಾಭಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಮಿನಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬ್ಯಾಂಕಿನ ವಾರ್ಷಿಕ ಸರ್ವಸಾಧಾರಣ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಯಾಂಕಿನಲ್ಲಿ ೩೨.೨೪೧.೨೧ ಲಕ್ಷಗಳಷ್ಟು ದುಡಿಯುವ ಬಂಡವಾಳವನ್ನು ಬ್ಯಾಂಕ್ ಹೊಂದಿದೆ, ೧೩೬ ಕೋಟಿ ರೂ. ಗಳ ಸಾಲ ವಿತರಣೆ ಆಗಿದೆ ಎಂದರು.

೨೦೦೨ರಲ್ಲಿ ಬ್ಯಾಂಕ್ ಆರಂಭಗೊಂಡಾಗ ೧೯೯೩ ಸದಸ್ಯರನ್ನು ಹೊಂದಿತ್ತು, ೨೦೨೪ರ ಮಾರ್ಚ ಅಂತ್ಯಕ್ಕೆ ೬೧೫೪ ಸದಸ್ಯರಾಗಿದ್ದರೆ, ೨೦೦೨ರಲ್ಲಿ ೪೪.೬೮ ಲಕ್ಷ ರೂ,ಗಳ ಶೇರು ಬಂಡವಾಳವನ್ನ ಹೊಂದಿತ್ತು, ೨೦೨೪ ರ ಮಾರ್ಚ ಅಂತ್ಯಕ್ಕೆ ೩೭೭.೫೯ ಕೋಟಿ ರೂ,ಗಳ ಶೇರು ಬಂಡವಾಳ ಹೊಂದಿದೆ. ೧.೬೫ ಲಕ್ಷ ರೂ,ಗಳ ನಿಽಯೊಂದಿಗೆ ಶುರುವಾದ ಬ್ಯಾಂಕ ಈಗ್ ೨೮೧೭.೪೨ ಲಕ್ಷ ರೂ,ಗಳ ನಿಽಗಳನ್ನು ಹೊಂದಿದೆ ಎಂದು ವಿವರಿಸಿದ ಅವರು, ಬ್ಯಾಂಕ್ ಆರಂಭದಲ್ಲಿ ೩.೬೩ ಕೋಟಿ ರೂ,ಗಳ ಸಾಲ ವಿತರಿಸಿತ್ತು, ಈಗ ೧೩೬ ಕೋಟಿ ರೂ.ಗಳ ಸಾಲ ವಿತರಿಸಿದೆ, ಆರಂಭದಲ್ಲಿ ೧೩.೧೪ ಲಕ್ಷ ರೂ,ಗಳ ಲಾಭ ಹೊಂದಿದ್ದ ಬ್ಯಾಂಕ್ ಪ್ರಸ್ತುತ ೧.೮೫ ಕೋಟಿ ರೂ.ಗಳ ಲಾಭಗಳಿಸಿದೆ. ಈ ಬಾರಿಯೂ ಶೇ ೧೫ ಡಿವಿಡೆಂಟ್ ವಿತರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸಂಘದಿಂದ ಉದ್ಯಮಿದಾರರಿಗೆ, ವ್ಯಾಪಾರಸ್ಥರಿಗೆ, ನೌಕರಸ್ಥರಿಗೆ, ಕೂಲಿ ಕಾರ್ಮಿಕರಿಗೆ ಅಲ್ಲದೆ ಇನ್ನುಳಿದ ಸದಸ್ಯರಿಗೆ ಅವರ ಅವಶ್ಯಕತೆಗಳ ಅನುಸಾರವಾಗಿ ಸಾಲಗಳನ್ನು ವಿತರಿಸಲಾಗುತ್ತಿದೆ, ಜಾಮೀನು ಸಾಲ, ಸಂಭಳ ಭದ್ರತೆ ಸಾಲ, ಆಸ್ತಿ ಭದ್ರತೆ ಸಾಲ, ಗೃಹನಿರ್ಮಾಣ, ವಾಹನ, ರೋಖ ಪತ್ತಿನ ಸಾಲ, ಚಿನ್ನ ಭದ್ರತೆ ಸಾಲಗಳನ್ನು ಬ್ಯಾಂಕಿನಲ್ಲಿ ವಿತರಿಸಲಾಗುತ್ತಿದೆ. ಬಿಇ ಕಾಲೇಜು ಶಾಖೆ, ಎಪಿಎಂಸಿ ಶಾಖೆ, ಅಡತ ಬಜಾರ ಶಾಖೆ, ಮುಧೋಳ ಶಾಖೆ, ಅಮೀನಗಡ ಶಾಖೆ ಹಾಗೂ ಕಮತಗಿ ಸೇರಿ ಒಟ್ಟು ೬ ಶಾಖೆಗಳು ಹಾಗೂ ನವನಗರದಲ್ಲಿ ಕೇಂದ್ರ ಕಚೇರಿ ಹೊಂದಿದೆ, ವರ್ಷದಿಂದ ವರ್ಷಕ್ಕೆ ಬ್ಯಾಂಕ್ ಪ್ರಗತಿ ಸಾಽಸುತ್ತ ಬಂದಿದೆ ಎಂದು ಹೇಳಿದರು.

ಹಿಂದಿನ ಸಾಮನ್ಯ ಸಭೆಯ ನಡುವಳಿಕೆಗಳನ್ನು ಓದಿ ದೃಢಿಕರಿಸಲಾಯಿತು. ೨೦೨೩-೨೪ನೇ ಸಾಲಿನ ವಾರ್ಷಿಕ ವರದಿಯನ್ನು ಓದಿ ಮಂಜೂರು ಮಾಡಲಾಯಿತು. ಬ್ಯಾಂಕಿನ ಉಪಾಧ್ಯಕ್ಷ ಮುರಿಗೆಪ್ಪ ನಾರಾ, ನಿರ್ದೇಶಕರಾದ ಗುರುಬಸವ ಸೂಳಿಬಾವಿ, ಈರಣ್ಣ ಅಥಣಿ, ಸುಭಾಸ ಜಿಗಜಿನ್ನಿ, ವೀರಣ್ಣ ಹಲಕುರ್ಕಿ, ಅಶೋಕ ಸಜ್ಜನ ಬೇವೂರ, ಪ್ರಭಯ್ಯ ಸರಗಣಾಚಾರಿ, ಪ್ರಕಾಶ ರೇವಡಿಗಾರ, ಮಲ್ಲಿಕಾರ್ಜುನ ಸಾಸನೂರ, ರುದ್ರಪ್ಪ ಅಕ್ಕಿಮರಡಿ, ಮಹೇಶ ಅಂಗಡಿ, ಕುಮಾರ ಯಳ್ಳಿಗುತ್ತಿ, ದಾಮೋದರ ರಾಠಿ, ಜಯಪ್ರಕಾಶ ಬೆಂಡಿಗೇರಿ, ಲಕ್ಷಿ÷್ಮÃ ನಾರಾಯಣ ಕಾಸಟ್, ರಾಜು ನಾಯ್ಕರ, ಭಾಗ್ಯಶ್ರೀ ಹಂಡಿ, ರೇಖಾ ಮೊರಬದ, ಬ್ಯಾಂಕ ವ್ಯವಸ್ಥಾಪಕ ಎಂ.ಎಚ್.ಹಿರೇಮಠ ಉಪಸ್ಥಿತರಿದ್ದರು.