ಚಿಕ್ಕಮಗಳೂರಿನ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಕೆಎಸ್‌ಆರ್‌ಟಿಸಿ ನೌಕರರ ಸಂಘದಿAದ ಕನಕದಾಸರ ಜಯಂತಿ ಆಚರಿಸಲಾಯಿತು. ಗಾಯತ್ರಿ ಶಾಂತೇಗೌಡ, ಬಿ.ಜಯಪ್ಪ, ಸುರೇಶ್, ಬೀರೇಗೌಡ, ಚಂದ್ರಶೇಖರ್ ಮತ್ತಿತರರಿದ್ದರು. 
ಜಿಲ್ಲೆ

ಪ್ರತಿ ಮನೆಯಲ್ಲಿ ಕನಕ ಜ್ಯೋತಿ ಹಚ್ಚಬೇಕು

ಚಿಕ್ಕಮಗಳೂರು: ಪ್ರಸ್ತುತ ಸಮಾಜದಲ್ಲಿ ಪ್ರತಿಯೊಬ್ಬರು ಕನಕ ಜ್ಯೋತಿಯನ್ನು ಪ್ರತಿದಿನ ಸಂಜೆ ಮನೆಯಲ್ಲಿ ಹಚ್ಚಿದಾಗ ಮಾತ್ರ ಕನಕದಾಸರ ನೆನಪು ಸದಾ ಮನಸ್ಸಿನಲ್ಲಿ ಉಳಿಯುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ತಿಳಿಸಿದರು.

ನಗರದ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ನೌಕರರ ಸಂಘದಿAದ ಸೋಮವಾರ ಏರ್ಪಡಿಸಲಾಗಿದ್ದ ಭಕ್ತಶ್ರೇಷ್ಠ ಶ್ರೀಕನಕದಾಸರ ೫೩೭ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗುರು ಪರಂಪರೆಯ ಇತಿಹಾಸವನ್ನೇ ಕಾಣದ ಕುರುಬ ಸಮುದಾಯಕ್ಕೆ ಕಾಗಿನೆಲೆಯಲ್ಲಿ ಮಠ ಸ್ಥಾಪನೆ ಮಾಡಿದ ನಂತರ ಇಂದು ಸಮಾಜ ಸಂಘಟತರಾಗಿ ಗುರುಪರಂಪರೆಯನ್ನು ಮೈಗೂಡಿಸಿಕೊಂಡು ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಾ ಬರುತ್ತಿದೆ ಎಂದರು.

ಪ್ರತಿ ಮನೆಯಲ್ಲಿ ಕನಕ ಜ್ಯೋತಿ ಹಚ್ಚುವುದರ ಜೊತೆಗೆ ಕನಕದಾಸರು ಸಂಕೀರ್ತನೆ, ಭಜನೆಗಳ ಮೂಲಕ ಸರ್ವರಿಗೂ ಮನ ಮುಟ್ಟುವಂತೆ ಮಾಡಿದ್ದಾರೆ. ಈ ಬಗ್ಗೆ ಮಕ್ಕಳಲ್ಲಿ ಧಾರ್ಮಿಕ ಭಾವನೆ ಬೆಳೆಸುವ ನಿಟ್ಟಿನಲ್ಲಿ ಪಾಲಕರು ಮುಂದಾಗಬೇಕೆAದು ತಿಳಿಸಿದರು.

ದಾಸ ಶ್ರೇಷ್ಠ ಭಕ್ತ ಕನಕದಾಸರ ಆಚಾರ-ವಿಚಾರಧಾರೆ ಹಾಗೂ ಸಂಸ್ಕೃತಿಯನ್ನು ಪ್ರಸ್ತುತ ಸಮಾಜಕ್ಕೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ನೌಕರರ ಸಂಘದ ಅಧ್ಯಕ್ಷ ಬಿ.ಜಯಪ್ಪ, ಕಾರ್ಯದರ್ಶಿ ಸುರೇಶ್, ಖಜಾಂಚಿ ಬೀರೇಗೌಡ, ಸಹಕಾರ್ಯದರ್ಶಿ ಚಂದ್ರಶೇಖರ್, ನಿರ್ದೇಶಕರಾದ ಮೊಗಣ್ಣ ಎಲೆಮುರಿಗಪ್ಪ, ಲೋಕೇಶ್, ವಸಂತ, ಮಧುಕುಮಾರ್, ದೇವರಾಜ್, ಬೀರೇಗೌಡ ಮತ್ತಿತರರಿದ್ದರು.