ಕಲಬುರಗಿ: ಪ್ರತಿ ಮನೆಗೆ ಶುದ್ಧ ನೀರು ಕೊಡಲು ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆ ರೂಪಿಸಿದ್ದು, ಅದರಂತೆ ಜಲ್ ಜೀವನ್ ಮಿಷನ್ ಅಡಿ ಎಲ್ಲ ಗ್ರಾಮಗಳಲ್ಲಿ ಕಾಮಗಾರಿ ಕೈಗೊಂಡು ನೀರು ಪೂರೈಸಲಾಗುತ್ತಿದೆ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಗಣಜಲಖೇಡ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ವಿಶ್ವ ಬ್ಯಾಂಕ್, ಫೀಡ್‌ಬ್ಯಾಕ್ ಫೌಂಡೇಷನ್ ಸಹಯೋಗದಲ್ಲಿ ದಿನದ ೨೪ಗಂಟೆ ನೀರು ಸರಬರಾಜು ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಉಭಯ ಸರ್ಕಾರಗಳ ನೆರವಿನೊಂದಿಗೆ ಕ್ಷೇತ್ರದ ಪ್ರತಿ ಮನೆಗೂ ಶುದ್ಧ ನೀರು ಪೂರೈಸಿ, ಜನರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಫೀಡ್ ಬ್ಯಾಕ್ ಫೌಂಡೇಷನ್ ರಾಜ್ಯ ಯೋಜನಾಧಿಕಾರಿ ನಂದಕುಮಾರ ಮಾತನಾಡಿ, ಪ್ರತಿ ಮನೆಗೆ ನಳ ಸಂಪರ್ಕ, ದಿನಕ್ಕೆ ಕನಿಷ್ಠ ೫೫ ಲೀಟರ್ ನೀರು ಪೂರೈಕೆ, ದೈನಂದಿನ ಕ್ಲೋರಿನೇಷನ್‌ಗೆ ಕನಿಷ್ಠ ಮೂರು ಮೀಟರ್ ನೀರು ಪೂರೈಸಲಾಗುವುದು. ನಿರ್ವಹಣೆಗೆ ಮಾಸಿಕ ಶುಲ್ಕ, ನೀರು ನಿರ್ವಹಿಸಲು ಸ್ಥಳೀಯ ಸ್ವಸಹಾಯ ಸಂಘಗಳ ಬಳಕೆ, ಪಂಚಮಿತ್ರ ಬಳಕೆ, ಗ್ರಾಪಂ ಸಮಿತಿ ಬಲವರ್ಧನೆಗೆ ಈ ಯೋಜನೆ ಪೂರಕವಾಗಲಿದೆ ಎಂದರು.
ಕಾರ್ಯಪಾಲಕ ಅಭಿಯಂತರ ಧನರರಾಜ ಲz್ದÉ ಮಾತನಾಡಿ, ನಿರಂತರ ನೀರು ಸರಬರಾಜು ಯೋಜನೆಯ ಲಾಭ ಪಡೆದು, ಸರಿಯಾಗಿ ನಿರ್ವಹಣೆ ಮಾಡಬೇಕು ಎಂದರು.
ಮುತ್ಯಾನ ಬಬಲಾದದ ಶ್ರೀ ಗುರುಪಾದಲಿಂಗ ಶಿವಯೋಗಿಗಳು, ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸಂಜಯಸಿAಗ್ ಶುಕ್ಲಾ, ಓಂಕಾರ, ರವಿಚಂದ್ರ, ಮಂಜು ಇತರರಿದ್ದರು. ಗ್ರಾಪಂ ಅಧ್ಯಕ್ಷ ಶ್ರೀಧರ ಪಾಟೀಲ್ ಸ್ವಾಗತಿಸಿದರು. ಮಲ್ಲಿಕಾರ್ಜುನ ವಂದಿಸಿದರು.