ತೋರನಹಳ್ಳಿ ಪ್ರತಿ ಮನೆ-ಮನೆಗೆ ಕಾಂಗ್ರೆಸ್ ಪ್ರಣಾಳಿಕೆ ತಲುಪಿಸಲಾಯಿತು. ಸದಾಶಿವ ದೇಶಿಂಗೆ, ಅಪ್ಪಾಸಾಹೇಬ ಕುಲಗುಡೆ, ರಾಜು ಪಾಟೀಲ, ಶಂಕರಗೌಡ ಪಾಟೀಲ, ಸಂಜಯ ಕಾಂಬಳೆ ಇತರರಿದ್ದರು. 
ಜಿಲ್ಲೆ

ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್

ಚಿಕ್ಕೋಡಿ: ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಹಾಗೂ ಕುಟುಂಬಕ್ಕೆ 2 ಸಾವಿರ ರೂ. ಘೋಷಿಸಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ ತಿಳಿಸಿದರು.

ತಾಲೂಕಿನ ತೋರನಹಳ್ಳಿ ಹಾಗೂ ಜೈನಾಪೂರ ಗ್ರಾಮಗಳಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಬಿಡುಗಡೆಗೊಳಿಸಿರುವ ಪ್ರಣಾಳಿಕೆ ಪ್ರತಿ ಮನೆ-ಮನೆಗೆ ತಲುಪಿಸುವ ಪಾದಯಾತ್ರೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರಗಳು ಗ್ಯಾಸ್ ಸಿಲಿಂಡರ್ ದರ ಏರಿಕೆ, ಪ್ರತಿ ಯುನಿಟ್‌ಗೆ ವಿದ್ಯುತ್ ದರ ಹೆಚ್ಚಳ ಹಾಗೂ ಕಾಂಗ್ರೆಸ್ ಜಾರಿಗೆ ತಂದಿದ್ದ ಉಚಿತ 10 ಕೆ.ಜಿ ಪಡಿತರ ವಿತರಣೆ ವ್ಯವಸ್ಥೆ ರದ್ದು ಮಾಡಿರುವುದು ಖಂಡನೀಯ ಎಂದು ತಿಳಿಸಿದರು. ಕಾಂಗ್ರೆಸ್ ಮುಖಂಡರಾದ ಸದಾಶಿವ ದೇಶಿಂಗೆ, ಅಪ್ಪಾಸಾಬ ಕುಲಗುಡ್ಡೆ, ಅರ್ಜುನ ನಾಯಿಕವಾಡಿ, ದಿಲೀಪ ಜಮಾದಾರ, ರಾಜಕುಮಾರ ಕೋಟಗಿ, ಬಾಹುಸಾಹೇಬ ಪಾಟೀಲ, ವಿಲಾಸ ಹೆರವಾಡೆ, ಮಹಾದೇವ ಸಲಗರೆ, ಅಶೋಕ ಮಜಲಟ್ಟಿ, ಅರ್ಜುನ ಬಂಡಗರ, ಸಿದ್ದಾರೂಢ ಬಂಡಗರ, ಶಂಕರಗೌಡ ಪಾಟೀಲ, ಹಾಜಿ ಮುಲಾ,್ಲ ರಾಜು ಪಾಟೀಲ, ನಾಮದೇವ ಕಾಂಬಳೆ, ಅರುಣ ನರಗುಂದೆ, ಜಯಶ್ರೀ ಮೋಹಿತೆ, ಎಸ್.ಬಿ ಜಮಾದಾರ, ಸಂಜಯ ಕಾಂಬಳೆ, ರಾಮಪ್ಪ ಪೂಜೇರಿ, ಕಷ್ಣ ನಾಯಿಕ, ಮೋಹನ ಪಾಟೀಲ, ಆನಂದ ಅಂಕಲಿ, ಗಣೇಶ ಮಹಾವೀರ, ಅನಿಲಗೌಡ ಪಾಟೀಲ, ಶಿವಾನಂದ ಪಾಟೀಲ, ಬಾಬುಕಾಕಾ ಪಾಟೀಲ, ಕಷ್ಣ ಜೋಶಿ, ಸದಾಶಿವ ಮುರಚಟ್ಚಿ, ಜ್ಞಾನೇಶ್ವರ ಪಾಟೀಲ, ಮಲ್ಲಗೌಡ ಪಾಟೀಲ, ತುಕಾರಾಮ ಪೂಜೇರಿ, ಅನಿಲ ಅಶೋದೆ, ಭೀಮು ಕಾಂಬಳೆ, ಲಕ್ಷ್ಮಣ ಮನಗುತ್ತಿ ಇತರರಿದ್ದರು.