ಅಥಣಿ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಮಾತನಾಡಿದರು. ಜಿ.ಎಂ. ಪಾಟೀಲ, ಶಂಕರ ವಾಘಮೋರೆ, ಗುರುಬಸು ದೇವರಮನಿ, ಗೂಳಪ್ಪ ಜತ್ತಿ, ಶಾಂತಿನಾಥ ನಂದೇಶ್ವರ, ವಿಶ್ವನಾಥ ಪೊಲೀಸಪಾಟೀಲ ಇತರರು ಇದ್ದರು. 
ಜಿಲ್ಲೆ

ಪ್ರತಿ ದಿನ 10 ಸಾವಿರ ಟನ್ ಕಬ್ಬು ನುರಿಸುವ ಸಾಮರ್ಥ್ಯ ಹೆಚ್ಚಳ

ವಿಜಯವಾಣಿ ಸುದ್ದಿಜಾಲ ಅಥಣಿ, ಬೆಳಗಾವಿ: ಕಬ್ಬಿಗೆ ಕಳೆದ ಬಾರಿ ಕೇಂದ್ರ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ನೀಡಿದ್ದೇವೆ. ಈ ವರ್ಷವೂ ಇತರ ಸಕ್ಕರೆ ಕಾರ್ಖಾನೆ ನಿಗದಿಪಡಿಸಿದ ದರವನ್ನೇ ಕೊಡುತ್ತೇವೆ ಎಂದು ಕೃಷ್ಣ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಹೇಳಿದರು.

2021-22ನೇ ಸಾಲಿನ ದಿ.ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ವತಿಯಿಂದ ಈಚೆಗೆ ವರ್ಚುವಲ್ ಮೂಲಕ ಹಮ್ಮಿಕೊಂಡಿದ್ದ 30ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ವರ್ಷ ರೈತರು ಕಾರ್ಖಾನೆ ಮೇಲೆ ನಂಬಿಕೆ ಇಟ್ಟು ಕಬ್ಬು ಕಳಿಸಬೇಕು. ಪ್ರಸಕ್ತ ವರ್ಷದಲ್ಲಿ ಪ್ರತಿ ದಿನ 10 ಸಾವಿರ ಟನ್ ಕಬ್ಬು ನುರಿಸುವ ಸಾಮರ್ಥ್ಯ ಹೆಚ್ಚಿಸುವುದಾಗಿ ಹೇಳಿದರು. ವ್ಯವಸ್ಥಾಪಕ ನಿರ್ದೇಶಕ ಜಿ.ಎಂ. ಪಾಟೀಲ, ಉಪಾಧ್ಯಕ್ಷ ಶಂಕರ ವಾಘಮೋಡೆ, ಆಡಳಿತ ಮಂಡಳಿ ನಿರ್ದೇಶಕ ಗುರುಬಸು ದೇವರಮನಿ, ಗೂಳಪ್ಪ ಜತ್ತಿ, ಶಾಂತಿನಾಥ ನಂದೇಶ್ವರ, ವಿಶ್ವನಾಥ ಪೊಲೀಸಪಾಟೀಲ, ಸೌರಭ ಪೋಲಿಸ್‌ಪಾಟೀಲ, ಮಲ್ಲಿಕಾರ್ಜುನ ಗೋಠಖಿಂಡಿ, ಸಿದ್ರಾಯ ನಾಯಿಕ, ಈರಪ್ಪ ಜಗದೇವ, ಸುರೇಶ ಠಕ್ಕಣ್ಣವರ, ಬಿ.ಎಂ.ಚೌಗಲಾ, ವಿ.ಪಿ. ಮನಗೂಳಿ, ಎಸ್.ಕೆ.ಪಡಸಲಗಿ, ದೀಪಕ ದೇಸಾಯಿ, ಎಂ.ಕೆ. ಬಾಷಾ, ಎ.ಸಿ. ರಾಚಪ್ಪನವರ, ವಿ.ಐ. ಪತ್ತಾರ ಇತರರು ಇದ್ದರು.