ಜಿಲ್ಲೆ

ಪ್ರತಿ ತಿಂಗಳು ಗ್ರಾಹಕರ ಸಭೆ

ಔರಾದ್: ಪ್ರತಿ ತಿಂಗಳು ಗ್ರಾಹಕರ ಸಭೆ ಕರೆದು ಕುಂದುಕೊರತೆ ಆಲಿಸಲಾಗುವುದು ಎಂದು ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಮಾಣಿಕ ಪವಾರ್ ಹೇಳಿದರು.

ಪಟ್ಟಣದ ಜೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ಸಾರ್ವಜನಿಕರ ಅಹವಾಲು ಸಭೆಯಲ್ಲಿ ಮಾತನಾಡಿ, ಗ್ರಾಹಕರ ಸಮಸ್ಯೆ ತಕ್ಷಣದಲ್ಲಿಯೇ ಸ್ಪಂದಿಸುವ ನಿಟ್ಟಿನಲ್ಲಿ ಇನ್ಮುಂದೆ ಪ್ರತಿ ತಿಂಗಳು ಸಭೆ ನಡೆಸಲಾಗುವುದು ಎಂದು ಹೇಳಿದರು.

ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ಕೊಡುವುದು ನಮ್ಮ ಕರ್ತವ್ಯ. ಯಾವುದೇ ವಿದ್ಯುತ್ ಸಮಸ್ಯೆ ಇದ್ದಲ್ಲಿ ಕಚೇರಿಗೆ ಅಥವಾ ಅಧಿಕಾರಿಗಳ ಗಮನಕ್ಕೆ ತಂದರೆ ಕೂಡಲೇ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರವಿಕುಮಾರ ಕಾರಬಾರಿ ಮಾತನಾಡಿದರು. ವಿಲ್ಸನ್ ಜೋಜನೆಕರ್, ಶಿವಕುಮಾರ ಮಂಡಲಾಪುರೆ, ಶಿವಾನಂದ ಬಿರಾದಾರ, ನಾಗನಾಥ, ಅನೀಲ ಜಿರೋಬೆ, ದೀಪಕ, ಬಾಬುರಾವ, ನಂದಕಿಶೋರ ಶಾಸ್ತ್ರಿ ಇದ್ದರು. ಜಗದೀಶ್ವರ ಸ್ವಾಗತಿಸಿದರು. ಕಮಲನಗರ, ಏಕಂಬಾ, ಸಂತಪುರ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಹಕರು ಪಾಲ್ಗೊಂಡು ತಮ್ಮ ಸಮಸ್ಯೆ ಕುರಿತು ಗಮನ ಸೆಳೆದರು.