ತುಮಕೂರು: ಗ್ರಾಮೀಣ ಭಾಗದಲ್ಲಿ ಕಾಲೇಜುಗಳಿಂದ ದೂರವಿರುವ ಯುವಜನರನ್ನು ಸಂಟಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಹೊಸ ಪ್ರಯತ್ನವೊಂದಕ್ಕೆ ಮುಂದಾಗಿದೆ, ಹಳ್ಳಿಗಳಲ್ಲಿ ಕಣ್ಮರೆಯಾಗುತ್ತಿರುವ ಯುವ ಸಂಗಳಿಗೆ ಕಾಯಕಲ್ಪ ನೀಡಲು ಕಾರ್ಯಕ್ರಮ ರೂಪಿಸಿದೆ.
ನಾಯಕತ್ವ ಗುಣ ಬೆಳೆಸುವ ಜತೆಗೆ ಗ್ರಾಮೀಣ ಯುವಜನರು ತಮ್ಮ ಜೀವನೋಪಾಯ ಮಾರ್ಗ ಸೃಷ್ಟಿಸಿಕೊಳ್ಳಲು ಅಗತ್ಯವಾದ "ಯುವಕ ಸಂ, ಯುವತಿ ಮಂಡಳಿ' ಪ್ರತಿ ಗ್ರಾಪಂಗೆ ಒಂದರಂತೆ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.
ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ನಲ್ಲಿ ೂಷಿಸಿರುವಂತೆ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗೊಂದು ಸ್ವಾಮಿ ವಿವೇಕಾನಂದ ಯುವಕರ ಸ್ವ ಸಹಾಯ ಗುಂಪು ರಚಿಸುವ ಬಗ್ಗೆ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಸ್ವಾಮಿ ವಿವೇಕಾನಂದ ಯುವಕರ ಸ್ವ ಸಹಾಯ ಗುಂಪು ರಚನೆ ಹಾಗೂ ಅನುಷ್ಠಾನಕ್ಕೆ ಅಗತ್ಯವಾದ ಮಾರ್ಗಸೂಚಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ಏ.6ರಂದು ನಡೆದ ಸಭೆಯಲ್ಲಿ ನಿರ್ಧಾರವಾಗಿದೆ. ಈ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನ ಹೊಣೆ ಜಿಪಂ ಸಿಇಒ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಮತ್ತು ರಾಜ್ಯದ ಯುವಜನ ಸಂಗಳ ಪದಾಧಿಕಾರಿಗಳ ಕೈಯಲ್ಲಿರಲಿದೆ.
ರಾಜ್ಯದ ಯುವ ಜನಸಂಖ್ಯೆಯಲ್ಲಿ ಶೇ.63 ಯುವಜನರು ಗ್ರಾಮೀಣ ಭಾಗದಲ್ಲಿಯೇ ಇದ್ದಾರೆ, ಇವರ ಬದುಕು ಉತ್ತಮಗೊಳ್ಳಬೇಕು, ಅವರಿಗೂ ಒಳ್ಳೆಯ ಅವಕಾಶಗಳು ಸಿಗಬೇಕು ಎಂಬ ಪರಿಕಲ್ಪನೆಯಲ್ಲಿ ಯುವ ಸಂಗಳು ಕೆಲಸ ಮಾಡಬೇಕಿದೆ.
ನೆರವಾಗದ ನೆಹರು ಯುವಕೇಂದ್ರ, ಯುವ ಸೇವಾ ಇಲಾಖೆ: ಗ್ರಾಮೀಣ ಭಾಗದ ಯುವ ಜನರನ್ನು ಸಂಟಿಸುವ ಸಲುವಾಗಿಯೇ ಕೇಂದ್ರ ಯುವ ಜನ ಸೇವಾ ಇಲಾಖೆ ವತಿಯಿಂದ ಪ್ರತಿ ಜಿಲ್ಲೆಯಲ್ಲಿರುವ ನೆಹರು ಯುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೂಡ ಯುವ ಜನರ ಪರವಾಗಿ ಕೆಲಸ ಮಾಡುವುದನ್ನೇ ಮರೆತಿವೆ. ಅನುದಾನ ಕೊರತೆ ಹಾಗೂ ಸರ್ಕಾರಗಳ ರ್ನಿಲಕ್ಷದಿಂದ ಕೆಲವೇ ಕೆಲವು ಕಾರ್ಯಕ್ರಮಗಳನ್ನು ಮಾಡಿ ಕೈತೊಳೆದುಕೊಳ್ಳಲಷ್ಟೇ ಈ ಇಲಾಖೆ ಕೇಂದ್ರಗಳು ಸೀಮಿತವಾಗಿವೆ. ಗ್ರಾಮೀಣ ಭಾಗದಲ್ಲಿ ಆಯೋಜಿಸಬೇಕಾದ ಕಾರ್ಯಕ್ರಮಗಳನ್ನು ಶಾಲೆ, ಕಾಲೇಜುಗಳಲ್ಲಿ ಆಯೋಜಿಸಿ ಜನರಿರುವ ೋಟೋ, ದಾಖಲಾತಿಗೆ ಸೀಮಿತಗೊಳಿಸಲಾಗುತ್ತಿದೆ.
ಹಳ್ಳಿಗಳಲ್ಲಿ ಬಾಗಿಲು ಮುಚ್ಚಿರುವ ಯುವ ಸಂಗಳು: ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಸಹಕಾರ ಸಂಗಳ ಕಾಯ್ದೆಯಡಿ 2242 ಯುವಕ, ಯುವತಿಯರ ಸಂಗಳು ಜಿಲ್ಲಾ ನೋಂದಣಾಕಾರಿ ಕಚೇರಿಯಲ್ಲಿ ನೋಂದಣಿಯಾಗಿವೆ. ಆದರೆ, ಇವುಗಳ ಆಸಕ್ತಿ ಕೇವಲ ನೋಂದಣಿಗಷ್ಟೇ ಸೀಮಿತವಾಗಿದ್ದು ನಂತರ ಉತ್ಸಾಹ ಕಳೆದುಕೊಂಡು ತೆರೆಮೆರೆಗೆ ಸರಿದಿವೆ. ಕೆಲವು ಸಂಗಳು ನವೀಕರಣ ಮತ್ತು ನಿರ್ವಹಣೆ ಕೊರತೆಯಿಂದ ನಿಷ್ಕ್ರಿಯಗೊಂಡಿವೆ.
ಯುವಜನರನ್ನು ಸಬಲೀಕರಣ ಮಾಡಬೇಕಾದ ಇಲಾಖೆಯೇ ಸಬಲೀಕರಣವಾಗಬೇಕಿದೆ. ಈ ನಡುವೆ ರಾಜ್ಯ ಸರ್ಕಾರ ಪ್ರತಿ ಗ್ರಾಪಂನಲ್ಲಿ ವಿವೇಕಾನಂದರ ಹೆಸರಿನಲ್ಲಿ ಸಂ ಸ್ಥಾಪನೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ, ಅನುಷ್ಟಾನದ ಜವಾಬ್ಧಾರಿ ಇರುವ ಅಧಿಕಾರಿಗಳು ಇದರ ಯಶಸ್ಸಿಗೆ ಶ್ರಮಿಸಬೇಕು. > ಕೆ.ಟಿ.ತಿಪ್ಪೇಸ್ವಾಮಿ ಸದಸ್ಯ, ರಾಜ್ಯ ಯುವ ನೀತಿ ರಚನಾ ಸಮಿತಿ