ಜಿಲ್ಲೆ

ಪ್ರತಾಪ ರೆಡ್ಡಿಯನ್ನು ಬೆಂಬಲಿಸಿ

ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಮತ ಕ್ಷೇತ್ರದಿಂದ ವಿಧಾನ ಪರಿಷತ್ ಆಯ್ಕೆ ಬಯಸಿರುವ ಪಕ್ಷೇತರ ಅಭ್ಯರ್ಥಿ ಪ್ರತಾಪ ರೆಡ್ಡಿ ಅವರನ್ನು ಪದವೀಧರರು ಬೆಂಬಲಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮನವಿ ಮಾಡಿದರು.

ಕಳೆದ ಬಾರಿ ಈಶಾನ್ಯ ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ತಾಂತ್ರಿಕ ದೋಷದಿಂದ ಪ್ರತಾಪ ರೆಡ್ಡಿ ಸೋತರು. ಇದೀಗ ಪುನಃ ಚುನಾವಣೆಗೆ ಸ್ಪರ್ಧಿಸಿದ್ದು, ಎರಡು ರಾಷ್ಟಿçÃಯ ಪP್ಷÀಗಳ ಮಧ್ಯೆ ಸಣ್ಣ ಪP್ಷÀ ಆಮ್ ಆದ್ಮಿ ಪಕ್ಷ ಪ್ರತಾಪ್ ರೆಡ್ಡಿ ಅವರಿಗೆ ಬೆಂಬಲ ನೀಡುತ್ತಿz್ದೆÃವೆ. ಪದವೀಧರರು ಕೈ ಹಿಡಿಯಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಾಲಿ ಎಂಎಲ್‌ಸಿ ಚಂದ್ರಶೇಖರ ಪಾಟೀಲ್ ಪದವೀಧರರಿಗೆ ಆರು ವರ್ಷದಲ್ಲಿ ಏನೂ ಮಾಡಲಿಲ್ಲ. ಅಮರನಾಥ ಪಾಟೀಲï ತಮ್ಮ ಅವಧಿಯಲ್ಲಿ ಏನು ಮಾಡಿz್ದÁರೆ. ಅವರ ಅವಧಿಯಲ್ಲಿ ಪದವೀಧರರನ್ನು ಭೇಟಿಯೇ ಆಗಿಲ್ಲ. ಪ್ರತಾಪ್‌ರೆಡ್ಡಿ ಬಳ್ಳಾರಿಯಲ್ಲಿ ಬರ ಬಂದಾಗ ಸ್ವಂತ ಖರ್ಚಿನಲ್ಲಿ ಜಾನುವಾರುಗಳಿಗೆ ಮೇವು ಕೊಡಿಸಿz್ದÁರೆ. ಭಾರತೀಯ ವೈದ್ಯ ಸಂಸ್ಥೆಗೆ ಜಮೀನು ನೀಡಿದ್ದಾರೆ. ಬಳ್ಳಾರಿಯವರು ಸ್ಪರ್ಧಿಸುವುದರಿಂದ ಕಲಬುರಗಿಯಿಂದ ಅವಕಾಶ ಕಿತ್ತುಕೊಂಡಿಲ್ಲ. ಇಲ್ಲಿಯ ಹಾಲಿ ಪ್ರತಿನಿಧಿಗಳು ಒಂದೇ ಒಂದು ಕಾರ್ಯಕ್ರಮದಲ್ಲೂ ಭಾಗವಹಿಸಲ್ಲ ಎಂದು ಆರೋಪಿಸಿದರು.

ಪಕ್ಷೇತರ ಅಭ್ಯರ್ಥಿ ಪ್ರತಾಪರೆಡ್ಡಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಆರು ಜಿ¯್ಲÉಗಳ ನಿರುದ್ಯೋಗಳಿಗೆ ಆರು ತಿಂಗಳಿಗೊಮ್ಮೆ ಉದ್ಯೋಗ ಮೇಳ ಮಾಡಲಾಗುವುದು. ಪ್ರತಿವರ್ಷ ಎಲ್ಲ ಉಪನ್ಯಾಸಕರಿಗೆ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗುವುದು. ಆದ್ದರಿಂದ ಒಂದು ಬಾರಿ ಅವಕಾಶ ನೀಡಬೇಕು ಎಂದರು. ಪ್ರದೀಪ ಗುಡ್ಡದ, ಎಂ.ಡಿ. ನಸೀಮೊದ್ದೀನ್ ಪಟೇಲ್ ಇದ್ದರು.