ಜಿಲ್ಲೆ

ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಿ

Yadgir


ಯಾದಗಿರಿ: ಚುನಾವಣೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಬ್ಬಗಳಿದ್ದಂತೆ, ಪ್ರತಿಯೊಬ್ಬ ಮತದಾರ ಈ ಸಡಗರದಲ್ಲಿ ಪಾಲ್ಗೊಳ್ಳಬೇಕು ಎಂದು ತಾಪಂ ಇಒ ಬಸವರಾಜ ಶರಬೈ ಸಲಹೆ ನೀಡಿದರು.
ಸೋಮವಾರ ತಾಲೂಕಿನ ಹತ್ತಿಕುಣಿ ವ್ಯಾಪ್ತಿಯ ಸೌದಾಗರ ತಾಂಡಾದಲ್ಲಿ ತಾಲೂಕು ಸ್ವೀಪ್ ಸಮಿತಿ ಹಾಗೂ ಗ್ರಾಪಂನ ಸಹಯೋಗದಲ್ಲಿ ಆಯೋಜಿಸಿದ್ದ ನಮ್ಮ ನಡೆ-ಮತಗಟ್ಟೆ ಕಡೆ ಅಭಿಯಾನ ಉದ್ಘಾಟಿಸಿ ಮಾತನಾಡಿ, ನಮ್ಮ ಮುಂದಿನ ಉತ್ತಮ ಭವಿಷ್ಯದ ನಿಮರ್ಾಣಕ್ಕೆ ಹಾಗೂ ನಮಗೆ ಬೇಕಾದ ಸುಭದ್ರ ಸಕರ್ಾರ ರಚನೆ ಮಾಡಲು ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡಬೇಕು. ಮತದಾನ ಪ್ರಕ್ರಿಯೆಯಿಂದ ಯಾರೂ ಹೊರಗುಳಿಯಬಾರದು ಎಂದು ಮನವಿ ಮಾಡಿದರು.
ನಮ್ಮ ದೇಶದ ಸಂವಿಧಾನ ಚುನಾವಣೆಯಲ್ಲಿ ನಿಭರ್ೀತಿಯಿಂದ ಯಾವುದೇ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಲು ಎಲ್ಲರಿಗೂ ಹಕ್ಕು ನೀಡಿದೆ. ಮತದಾನದ ಹಕ್ಕನ್ನು ಚಲಾುಸುವುದು ನಮ್ಮೆಲ್ಲರ ಕರ್ತವ್ಯ ಹಾಗಾಗೀ ಜವಾಬ್ದಾರಿಯುತ ಪ್ರಜೆಗಳಾದ ನಾವೆಲ್ಲರೂ ಈ ಬಗ್ಗೆ ತಿಳಿವಳಿಕೆ ಮೂಡಿಸಿಕೊಳ್ಳುವ ಅಗತ್ಯವಿದೆ. ಮತದಾರರ ಪಟ್ಟಿಯಲ್ಲಿ ಹೆಸರಿರುವ ಅರ್ಹರು, ಯುವಕರು ಮತ್ತು ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಬೇಕು ಎಂದರು.
ಈ ವೇಳೆ ಬಂಜಾರ ಸಮುದಾಯದ ಮಹಿಳೆಯರು ಸಾಂಪ್ರದಾಯಿಕ ಉಡುಗೆ ಧರಿಸಿ ತಮಟೆ ವಾದ್ಯ ಹಾಗೂ ಧ್ವನಿ ವರ್ಧಕದ ಹಾಡಿಗೆ ನೃತ್ಯ ಮಾಡಿ ಮತದಾರರ ಗಮನ ಸೆಳೆದರು. ಗ್ರಾಪಂನಿಂದ ಮತಗಟ್ಟೆ ಆವರಣದಲ್ಲಿ ಮಹಿಳೆಯರಿಗಾಗಿ ಮತದಾನ ಜಾಗೃತಿ ಸಂದೇಶ ಸಾರುವ ನಾನಾ ತರಹದ ರಂಗೋಲಿ ಬಿಡುಸುವ ಸ್ಪಧರ್ೆ ಹಾಗೂ ಮೇಹಂದಿ ಹಾಕುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ತಾಪಂ ಶಿವರಾಯ ಗುಂಡಗುತರ್ಿ, ಪಿಡಿಒ ನಿಂಗಣ್ಣ ಕಣಮೇಶ್ವರ, ಸುಮಾ, ಜಯಕುಮಾರ, ಸಾಯಿಕುಮಾರ, ರಾಜು, ಮುದಕಪ್ಪ, ಬಸಪ್ಪ ಹೋತಪೇಟ ಇದ್ದರು.