ಶಿಕಾರಿಪುರ: ಕುಮದ್ವತಿ ಪ್ರೌಢಶಾಲೆಯಲ್ಲಿ 2025-26ನೇ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿ ಸಂಸತ್ ನಡೆಸಲಾಯಿತು. ಇಲಾಖೆ ಮಾರ್ಗಸೂಚಿಯಂತೆ ಚುನಾವಣಾ ಅಸೂಚನೆ, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆತ, ನಾಮಪತ್ರ ಪರಿಶೀಲನೆ, ಚುನಾವಣಾ ಪ್ರಚಾರ, ಚುನಾವಣಾ ದಿನಾಂಕ, ಮತ ಎಣಿಕೆ ದಿನಾಂಕ ಘೋಷಣೆ ವಿಷಯಗಳನ್ನು ಕ್ರಮಬದ್ಧವಾಗಿ ವಿದ್ಯಾರ್ಥಿಗಳೇ ನಿರ್ವಹಣೆ ಮಾಡಿದರು.
ಶಾಲೆಯ ವಿವಿಧ ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ, ಶಾಲೆ ಸ್ವಚ್ಛತೆ, ಪ್ರವಾಸ ಇನ್ನಿತರ ಚಟುವಟಿಕೆಗಳ ಜವಾಬ್ದಾರಿ ಹಾಗೂ ಅದರಲ್ಲಿನ ನ್ಯೂನತೆಗಳನ್ನು ಮುಖ್ಯಶಿಕ್ಷಕರಿಗೆ ತೋರಿಸಿ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮಾಡಲು ಚುನಾವಣೆ ನಡೆಸಲಾಗಿದೆ.
ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವುದು ಚುನಾವಣೆ ಮತ್ತು ಸಂಸತ್ ರಚನೆ ಉದ್ದೇಶವಾಗಿತ್ತು. ಮಕ್ಕಳಿಗೆ ಜವಾಬ್ದಾರಿ, ಮುಂದಾಳತ್ವ ವಹಿಸುವುದು ಶಾಲಾ ಸಂಸತ್ ಗುರಿ. 15 ವಿದ್ಯಾರ್ಥಿಗಳು ಅಭ್ಯರ್ಥಿಗಳಾಗಿ ಶಾಲಾ ಸಂಸತ್‌ನಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಶಿಸ್ತಿನಿಂದ ಅವರಿಗೆ ಇಷ್ಟವಾದ 10 ಅಭ್ಯರ್ಥಿಗಳಿಗೆ ಮತದಾನ ಮಾಡಿದರು.
ಪ್ರಾಚಾರ್ಯ ಪಿ.ವಿಶ್ವನಾಥ ಚುನಾವಣಾಕಾರಿಯಾಗಿ ಕಾರ್ಯನಿರ್ವಹಿಸಿದರು. ಪ್ರಭಾರಿ ಮುಖ್ಯಶಿಕ್ಷಕ ಪ್ರಶಾಂತ ಕುಬಸದ ಬೂತ್ ಅಕಾರಿಯಾಗಿ, ಶಿಕ್ಷಕರಾದ ರೇಷ್ಮಾ ಬಾನು, ಮಂಜುಳಾ ಪಾಟೀಲ್, ಲಲಿತಾ ಚಂದ್ರಮತಿ, ರೇಖಾ, ಹಾಲಸ್ವಾಮಿ, ನಿಂಗಪ್ಪ, ಚಂದ್ರಶೇಖರ್, ಪರಮೇಶ್, ವಿಕ್ಟೋರಿಯಾ ಮತದಾನ ಅಕಾರಿಗಳಾಗಿ ಕಾರ್ಯನಿರ್ವಹಿಸಿದರು. ವಿದ್ಯಾರ್ಥಿ ತೇಜಸ್ ಪೊಲೀಸ್ ಆಗಿ ಕಾರ್ಯನಿರ್ವಹಿಸಿದ.